ಡೊಮ್ಡೊಮಾ: ಬಾಲರಾಮ ಪ್ರಾಣ ಪ್ರತಿಷ್ಠಾಪನೆಯು ಬಿಜೆಪಿಯ ರಾಜಕೀಯ ಸಮಾರಂಭವಾಗಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಅಲ್ಲದೆ ಅದು ಯಾವುದೇ ಅಲೆಯನ್ನು ಸೃಷ್ಟಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಬಾಲ ರಾಮ ಪ್ರತಿಷ್ಠಾಪನೆಯಿಂದ ಸೃಷ್ಟಿಯಾಗಿರುವ ಅಲೆಗೆ ಹೇಗೆ ಪ್ರತ್ಯುತ್ತರ ನೀಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಾಗೇನೂ ಆಗಿಲ್ಲ. ಯಾವ ಅಲೆಯೂ ಇಲ್ಲ. ಇದು ಬಿಜೆಪಿಯ ರಾಜಕೀಯ ಕಾರ್ಯಕ್ರಮ ಎಂದು ನಾನು ಮೊದಲೇ ಹೇಳಿದ್ದೆ. ನರೇಂದ್ರ ಮೋದಿ ಅಲ್ಲಿ ಒಂದು ಕಾರ್ಯಕ್ರಮ ಮಾಡಿದ್ದಾರೆ ಅಷ್ಟೇ’ ಎಂದು ರಾಹುಲ್ ಹೇಳಿದ್ದಾರೆ.
.ಬಿಜೆಪಿ ಬೆದರಿಕೆಗಳು ಯಾತ್ರೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ: ರಾಹುಲ್ ಗಾಂಧಿ.
ಇದೇ ವೇಳೆ ಭಾರತ ಜೋಡೊ ನ್ಯಾಯ ಯಾತ್ರೆಗೆ ಅಡ್ಡಿಪಡಿಸಿದ್ದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ವಿರುದ್ಧವೂ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು. ಅವರ ಕ್ರಮದಿಂದಾಗಿ ಯಾತ್ರೆಗೆ ಹೆಚ್ಚಿನ ಪ್ರಚಾರ ಸಿಗಲಿದೆ. ಅಸ್ಸಾಂನಲ್ಲಿ ನ್ಯಾಯ ಯಾತ್ರೆಯೇ ಪ್ರಮುಖ ವಿಷಯವಾಗಿದೆ ಎಂದರು.

‘ದೇಶದಲ್ಲಿರುವ ಮುಖ್ಯಮಂತ್ರಿಗಳ ಪೈಕಿ ಅಸ್ಸಾಂ ಮುಖ್ಯಮಂತ್ರಿ ಅತೀ ಭ್ರಷ್ಟರಾಗಿದ್ದಾರೆ. ಭ್ರಷ್ಟಾಚಾರ ಹೆಚ್ಚಿದೆ. ಹಣದುಬ್ಬರ ಏರಿಕೆಯಾಗಿದೆ. ರೈತರು ಕಷ್ಟಪಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ರಾಜ್ಯದ ಹಲವು ಭಾಗಗಳಲ್ಲಿ ಸಂಚರಿಸಿದಾಗ ಜನರು ನನ್ನೊಂದಿಗೆ ಹೇಳಿದ್ದಾರೆ. ಇದರ ಬಗ್ಗೆಯೇ ನಾವು ಧ್ವನಿ ಎತ್ತುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
.ಬಿಜೆಪಿಯಿಂದ ಜಾತಿ, ಮತ, ಧರ್ಮದ ಹೆಸರಲ್ಲಿ ದೇಶ ಒಡೆಯುವ ಕೆಲಸ: ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.