ನವದೆಹಲಿ: ಕೋವಿಡ್–19 ಕಾರಣದಿಂದಾಗಿ ಮುಂದಿನ ವರ್ಷದ ಫೆಬ್ರುವರಿಯವರೆಗೆ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಂಗಳವಾರ ತಿಳಿಸಿದರು.

ಪರಿಸ್ಥಿತಿಯನ್ನು ನೋಡಿಕೊಂಡು ಹಾಗೂ ತಜ್ಞರ ಜೊತೆ ಚರ್ಚೆ ನಡೆಸಿ, ಪರೀಕ್ಷೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದರು.

‘ಪ್ರಸ್ತುತ ಇರುವ ಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು, 2021 ಫೆಬ್ರುವರಿಯವರೆಗೆ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸದೇ ಇರಲು ನಿರ್ಧರಿಸಲಾಗಿದೆ’ ಎಂದು ಆನ್‌ಲೈನ್ ಮುಖಾಂತರ ನಡೆದ ಶಿಕ್ಷಕರ ಜೊತೆಗಿನ ಸಂವಾದದ ವೇಳೆ ನಿಶಾಂಕ್ ತಿಳಿಸಿದರು. 2021ರಲ್ಲಿ ಪರೀಕ್ಷೆಗಳನ್ನು ಲಿಖಿತ ರೂಪದಲ್ಲೇ ನಡೆಸುವುದಾಗಿ ತಿಂಗಳ ಆರಂಭದಲ್ಲಿ ಸಿಬಿಎಸ್‌ಇ ತಿಳಿಸಿತ್ತು.

ಕೋವಿಡ್–19 ಪಿಡುಗು ವ್ಯಾಪಿಸುವುದನ್ನು ತಡೆಯುವ ಉದ್ದೇಶದಿಂದ ಕಳೆದ ಮಾರ್ಚ್‌ನಲ್ಲೇ ದೇಶದಾದ್ಯಂತ ಶಾಲೆಗಳನ್ನು ಮುಚ್ಚಲಾಗಿತ್ತು. ಆ ಸಂದರ್ಭದಲ್ಲಿ ಮುಂದೂಡಲ್ಪಟ್ಟಿದ್ದ ಪರೀಕ್ಷೆಯನ್ನು ಸಿಬಿಎಸ್‌ಇ ರದ್ದುಗೊಳಿಸಿ, ಈ ಹಿಂದಿನ ಪರೀಕ್ಷೆಗಳಲ್ಲಿ ವಿದ್ಯಾರ್ಥಿಯು ಪಡೆದ ಅಂಕದ ಆಧಾರದಲ್ಲಿ ಅಂತಿಮ ಪರೀಕ್ಷೆಯ ಅಂಕವನ್ನು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.