ಜಮ್ಮು, ಅಟ್ಟಾರಿ: ‘ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಸೇನೆ ಮತ್ತು ಬಿಎಸ್ಎಫ್ ಸಿಬ್ಬಂದಿ ಭಾನುವಾರ ಪಾಕಿಸ್ತಾನದ ಗಡಿ ಭದ್ರತಾ ಯೋಧರೊಂದಿಗೆ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಮತ್ತು ಅಂತರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಸಿಹಿ ವಿನಿಮಯ ಮಾಡಿಕೊಂಡರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಭಾರತೀಯ ಸೇನೆಯು ಪಾಕಿಸ್ತಾನದ ಸೇನಾ ಪಡೆಗಳೊಂದಿಗೆ ಮೆಂಧರ್ನ ತಟಪಾನಿ ಕ್ರಾಸಿಂಗ್ ಪಾಯಿಂಟ್ ಮತ್ತು ಪೂಂಚ್ ಜಿಲ್ಲೆಯ ಎಲ್ಒಸಿ ಉದ್ದಕ್ಕೂ ರಾವಲಕೋಟ್ ಕ್ರಾಸಿಂಗ್ ಪಾಯಿಂಟ್ನಲ್ಲಿ ಸಿಹಿ ಮತ್ತು ಅಭಿನಂದನೆಗಳನ್ನು ವಿನಿಮಯ ಮಾಡಿಕೊಂಡಿದೆ’ ಎಂದು ರಕ್ಷಣಾ ಇಲಾಖೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

‘ಅಮೃತಸರದಿಂದ 35 ಕಿ.ಮೀ. ದೂರವಿರುವ ಅಟ್ಟಾರಿ–ವಾಘಾ ಗಡಿಯಲ್ಲಿ ಭಾರತದ ಬಿಎಸ್ಎಫ್ ಪಡೆಯು ಪಾಕಿಸ್ತಾನದ ಗಡಿಭದ್ರತಾ ಯೋಧರೊಂದಿಗೆ ಸಿಹಿ ವಿನಿಮಯ ಮಾಡಿಕೊಂಡಿತು. ಎರಡೂ ಕಡೆಯ ಭದ್ರತಾ ಸಿಬ್ಬಂದಿ ಪರಸ್ಪರ ಕೈಕುಲುಕಿದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಗನ್ ಗಡಿಗಳು ತಾಲಿಬಾನ್ ಕೈಗೆ: ಹೊರ ಹೋಗಲು ಕಾಬೂಲ್ ಏರ್ಪೋರ್ಟ್ ಏಕೈಕ ಮಾರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.