ಮುಂಬೈ: ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗೆ ತಡೆ ನೀಡಬೇಕು ಎಂಬ ‘ಗೋದ್ರೇಜ್’ ಮತ್ತು ‘ಬಾಯ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ’ಯ ಕೋರಿಕೆಯನ್ನು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ವಿಕ್ರೋಲಿ ಎಂಬಲ್ಲಿರುವ ಸಂಸ್ಥೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಮತ್ತು ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಗೋದ್ರೇಜ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಯನ್ನು 'ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆ' ಎಂದು ಬಾಂಬೆ ಹೈಕೋರ್ಟ್ ಪರಿಗಣಿಸಿದೆ.

‘ಭೂ ಸ್ವಾಧೀನದಲ್ಲಿ ಯಾವುದೇ ಅಕ್ರಮವಿಲ್ಲ’ ಎಂದು ಹೇಳಿದ ನ್ಯಾಯಮೂರ್ತಿ ಆರ್.ಡಿ ಧನುಕಾ ಮತ್ತು ನ್ಯಾಯಮೂರ್ತಿ ಎಂ.ಎಂ ಸಾಥೆ ಅವರಿದ್ದ ವಿಭಾಗೀಯ ಪೀಠ ಯೋಜನೆಗೆ ತಡೆ ನೀಡಲು ನಿರಾಕರಿಸಿತು.

ಜಪಾನ್ನ ಸಹಯೋಗದೊಂದಿಗೆ 2019ರಲ್ಲಿ ಕೈಗೆತ್ತಿಕೊಳ್ಳಲಾಗಿರುವ ಬುಲೆಟ್ ರೈಲು ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಎಂದೇ ಕರೆಯಲಾಗುತ್ತಿದೆ.

508 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಯೋಜನೆಯು 21 ಕಿಲೋಮೀಟರ್ನಷ್ಟು ಉದ್ದದ ಸುರಂಗ ಮಾರ್ಗವನ್ನು ಹೊಂದಿದೆ. ನೆಲದಡಿಯ ಸುರಂಗ ಮಾರ್ಗದ ಪ್ರವೇಶ ದ್ವಾರವೊಂದು ವಿಕ್ರೋಲಿಯಲ್ಲಿರುವ ಗೋದ್ರೇಜ್ ಒಡೆತನದ ಭೂಮಿಯಲ್ಲೇ ಬರಲಿದೆ. ಈ ಜಾಗವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ.

ಇವುಗಳನ್ನೂ ಓದಿ

ಮೈಸೂರು–ಚೆನ್ನೈ ಬುಲೆಟ್ ರೈಲು| ಡಿಪಿಆರ್ ಸಲ್ಲಿಸಲು ಕೇಂದ್ರ ನಿರ್ದೇಶನ: ಸೋಮಣ್ಣ

2026ರ ವೇಳೆಗೆ ಮೊದಲ ಹಂತದ ಬುಲೆಟ್ ರೈಲು ಯಾನ

PV Web Exclusive: ಕಲಬುರ್ಗಿ ಜನರಿಗೆ ಬುಲೆಟ್ ರೈಲಿನ ಕನಸು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.