ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತನಿಖಾ ಸಂಸ್ಥೆಗಳು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ: ಸೈಬರ್ ಕ್ರೈಂ ಸಮನ್ವಯ ಕೇಂದ್ರ

Published : 6 ಅಕ್ಟೋಬರ್ 2024, 15:43 IST
Last Updated : 6 ಅಕ್ಟೋಬರ್ 2024, 15:43 IST
ಫಾಲೋ ಮಾಡಿ
Comments

ನವದೆಹಲಿ: ಸಿಬಿಐ, ಪೊಲೀಸ್‌, ಕಸ್ಟಮ್ಸ್‌ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯ ಭಾಗವಾಗಿ ವಿಡಿಯೊ ಕರೆ ಮೂಲಕ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ ಎಂದು ಭಾರತೀಯ ಸೈಬರ್‌ ಕ್ರೈಂ ಸಮನ್ವಯ ಕೇಂದ್ರ (ಐ4ಸಿ) ಸ್ಪಷ್ಟನೆ ನೀಡಿದೆ.

‘ಡಿಜಿಟಲ್‌ ಅರೆಸ್ಟ್’ ಅಪರಾಧ ಕೃತ್ಯಗಳು ಗಣನೀಯವಾಗಿ ಏರುತ್ತಿರುವುದರಿಂದ ಈ ಸ್ಪಷ್ಟನೆ ನೀಡಿದೆ. ‘ಡಿಜಿಟಲ್‌ ಅರೆಸ್ಟ್‌‘ ವಂಚನೆ ಪ್ರಕರಣ ಎಂದು ಹೇಳೀರುವ ಐ4ಸಿ, ಇಂಟರ್‌ನೆಟ್ ಮೂಲಕ ನಡೆಯುವ ಇವುಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಸಲಹೆ ಮಾಡಿದೆ.

‘ಆತಂಕಗೊಳ್ಳಬೇಡಿ, ಜಾಗ್ರತೆಯಿಂದಿರಿ. ವಿಡಿಯೊ ಕರೆ ಮಾಡುವ ಮೂಲಕ ಸಿಬಿಐ, ಪೊಲೀಸ್‌, ಕಸ್ಟಮ್ಸ್‌ ಮತ್ತು ಇ.ಡಿ ಅಧಿಕಾರಿಗಳು ಎಂದಿಗೂ ಡಿಜಿಟಲ್‌ ಅರೆಸ್ಟ್ ಮಾಡುವುದಿಲ್ಲ’ ಎಂದು ಈ ಕುರಿತು ಹೇಳಿಕೆ ನೀಡಿದೆ.

ಇಂತಹ ವಂಚನೆ ಯತ್ನ ಪ್ರಕರಣಗಳಲ್ಲಿ ಐ4ಸಿಗೆ ಸಹಾಯವಾಣಿ 1930ಗೆ ಕರೆ ಮಾಡಿ ಅಥವಾ ಸಂಸ್ಥೆಯ ವೆಬ್‌ಸೈಟ್ (www.cybercrime.gov.in) ಸಂಪರ್ಕಿಸುವ ಮೂಲಕ ಮಾಹಿತಿ ನೀಡಬೇಕು ಎಂದು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT