ರಾಯ್‌ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಾವೊವಾದಿಗಳು ನಡೆಸಿದ್ದ ಐಇಡಿ ಸ್ಫೋಟದಿಂದ ಗಾಯಗೊಂಡಿದ್ದ ಸಿಆರ್‌ಪಿಎಫ್‌ನ ಕಮಾಂಡೊ ‘ಕೋಬ್ರಾ’ ಘಟಕದ ಅಧಿಕಾರಿಯೊಬ್ಬರು ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ನಡೆದ ಈ ಘಟನೆಯಲ್ಲಿ ಕೋಬ್ರಾ 208ನೇ ಬೆಟಾಲಿಯನ್‌ಗೆ ಸೇರಿದ ಡೆಪ್ಯೂಟಿ ಕಮಾಂಡೆಂಟ್ ವಿಕಾಸ್ ಕುಮಾರ್ ಗಂಭೀರ ಗಾಯಗೊಂಡಿದ್ದರು. ಅವರನ್ನು ರಾಯ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಬಸ್ತರ್ ಶ್ರೇಣಿ) ಸುಂದರರಾಜ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದೇ ರೀತಿ ನವೆಂಬರ್ 28ರಂದು, ರಾಯ್‌ಪುರದಿಂದ 450 ಕಿ.ಮೀ ದೂರದಲ್ಲಿರುವ ಸುಕ್ಮಾದ ಚಿಂತಲ್‌ನರ್ ಪ್ರದೇಶದಲ್ಲಿ ಮಾವೊವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ ಕೋಬ್ರಾ ಘಟಕದ ಅಧಿಕಾರಿಯೊಬ್ಬರು ಮೃತಪಟ್ಟು ಒಂಬತ್ತು ಕಮಾಂಡೊಗಳು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.