ಚೆನ್ನೈ: ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಆಡಳಿತಾರೂಢ ಡಿಎಂಕೆಯ ಮೂವರು ಮತ್ತು ವಿರೋಧ ಪಕ್ಷವಾದ ಎಐಎಡಿಎಂಕೆಯ ಇಬ್ಬರು ತಮಿಳುನಾಡು ವಿಧಾನಸಭೆಯಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಎಲ್ಲಾ ಆರು ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳನ್ನು ತಮಿಳುನಾಡು ವಿಧಾನಸಭೆಯ ಕಾರ್ಯದರ್ಶಿ, ಚುನಾವಣಾಧಿಕಾರಿ ಕೆ.ಶ್ರೀನಿವಾಸನ್ ಅವರು ಬುಧವಾರ ಪರಿಶೀಲನೆ ನಡೆಸಿದರು. ಎಲ್ಲಾ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶುಕ್ರವಾರ ಅಭ್ಯರ್ಥಿಗಳ ಅವಿರೋಧ ಆಯ್ಕೆ ಘೋಷಿಸಲಾಗುವುದು.

ಪಿ.ಚಿದಂಬರಂ (ಕಾಂಗ್ರೆಸ್), ‘ತಂಜೈ’ ಎಸ್.ಕಲ್ಯಾಣಸುಂದರಂ, ಆರ್. ಗಿರಿರಾಜನ್ ಮತ್ತು ಕೆ.ಆರ್.ಎನ್. ರಾಜೇಶ್‌ಕುಮಾರ್ (ಎಲ್ಲರೂ ಡಿಎಂಕೆ), ಸಿ.ವಿ.ಷಣ್ಮುಖಂ ಮತ್ತು ಆರ್.ಧರ್ಮರ್ (ಇಬ್ಬರೂ ಎಐಎಡಿಎಂಕೆ) ರಾಜ್ಯದಿಂದ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿದವರು.

ಚಿದಂಬರಂ ಅವರ ಆಯ್ಕೆಯೊಂದಿಗೆ ಆರು ವರ್ಷಗಳ ನಂತರ ತಮಿಳುನಾಡಿನಿಂದ ಕಾಂಗ್ರೆಸ್ ರಾಜ್ಯಸಭೆ ಸದಸ್ಯರನ್ನು ಹೊಂದಿದಂತಾಗಿದೆ. ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ನಾಲ್ಕು ಸ್ಥಾನಗಳನ್ನು ಗೆಲ್ಲುವಷ್ಟು ಸದಸ್ಯ ಬಲವನ್ನು ಹೊಂದಿದ್ದರೆ, ಎಐಎಡಿಎಂಕೆ ಎರಡು ಸ್ಥಾನವನ್ನು ಗೆಲ್ಲುವಷ್ಟು ಸದಸ್ಯರನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.