ನವದೆಹಲಿ: ಅತೀ ಗಣ್ಯರ ಪ್ರಯಾಣದ ಅಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಮಧ್ಯವರ್ತಿ ಆರೋಪಿ ಕ್ರಿಶ್ಚಿಯನ್ ಮಿಷೆಲ್ ಜೇಮ್ಸ್ನನ್ನು ಎಲ್ಲಿಯವರೆಗೆ ವಶದಲ್ಲಿರಿಸಿಕೊಳ್ಳುತ್ತೀರಿ ಎಂದುಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು,‘ಆತ ಭಾರತೀಯ ಪ್ರಜೆಯಲ್ಲವೆಂಬ ಕಾರಣಕ್ಕೆ ಇದು ಸಮರ್ಥನೀಯವಲ್ಲ, ಇದು ಆತನ ಸಂಪೂರ್ಣಸ್ವಾತಂತ್ರ್ಯದ ಹರಣವಲ್ಲವೇ’ ಎಂದು ತನಿಖಾ ಏಜೆನ್ಸಿಗಳಾದ ಸಿಬಿಐ ಮತ್ತು ಇ.ಡಿ ಪರ ಹಾಜರಾಗಿದ್ದಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಪ್ರಶ್ನಿಸಿತು.

‘ಸಾಮಾನ್ಯವಾಗಿ ಆರೋಪಿ ಭಾರತೀಯನಾಗಿದ್ದು, ಗರಿಷ್ಠ ಐದು ವರ್ಷ ಶಿಕ್ಷೆ ವಿಧಿಸಬಹುದಾದ ಅಪರಾಧ ಆತನ ಮೇಲಿದ್ದು, ನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲ ಆತ ಬಂಧನದಲ್ಲಿದ್ದರೆನ್ಯಾಯಾಲಯ ಜಾಮೀನು ನೀಡುತ್ತಿತ್ತು’ ಎಂದು ಪೀಠ ಹೇಳಿದೆ.

ಆರೋಪಿ ಮೇಲೆ ಐಪಿಸಿ 467 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ಭಾಗಿಯಾಗಿರುವ ಹಗರಣ ಈಗ ವಿಚಾರಣೆಯ ವಿಷಯವಾಗಿದೆ ಎಂದು ರಾಜು ಅವರು ಪೀಠದ ಗಮನಕ್ಕೆ ತಂದರು.

ಈ ವಾದ ಆಲಿಸಿದ ನಂತರಪೀಠವು, ಪ್ರಕರಣದ ಮುಂದಿನ ವಿಚಾರಣೆಯನ್ನು ಬರುವ ಜನವರಿ ಎರಡನೇ ವಾರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ಬ್ರಿಟನ್ ಪ್ರಜೆಯಾದ ಕ್ರಿಶ್ಚಿಯನ್ ಮಿಷೆಲ್ಜೇಮ್ಸ್ನನ್ನು ದುಬೈ 2018ರಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.