ನವದೆಹಲಿ (ಪಿಟಿಐ): ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರ ಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್ ಸಲ್ಲಿಸಿದ ಅರ್ಜಿ ಸಂಬಂಧ ಆದೇಶವನ್ನು ದೆಹಲಿ ಕೋರ್ಟ್ ಗುರುವಾರ ಕಾಯ್ದಿರಿಸಿದೆ.

ಆರೋಪಪಟ್ಟಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಕರಣವನ್ನು ರಾಜಕೀಯಗೊಳಿಸುತ್ತಿದೆ ಎಂದುಮಿಷೆಲ್ ಆರೋಪಿಸಿದ್ದಾರೆ.

ಎರಡೂ ಕಡೆಯ ವಕೀಲರ ವಾದ ಆಲಿಸಿದ ವಿಶೇಷ ನ್ಯಾಯಾಧೀಶ ಅರ ವಿಂದ್ ಕುಮಾರ್ ಅವರು ಆದೇಶವನ್ನು ಮೇ 3 ರಂದು ನೀಡುವುದಾಗಿ ಪ್ರಕಟಿಸಿದರು.

ಆರೋಪಪಟ್ಟಿಯಲ್ಲಿನ ಅಂಶ ಗಳನ್ನು ಮಾಧ್ಯಮಗಳು ಪ್ರಕಟಿಸುವುದರಲ್ಲಿ ಇಲ್ಲವೇಪ್ರಸಾರ ಮಾಡುವಲ್ಲಿ ಯಾವುದೇ ತಪ್ಪು ಇಲ್ಲ. ಈ ಬಗ್ಗೆ ಈಗಾಗಲೇ ನ್ಯಾಯಾಲಯಕ್ಕೆ ಮಾಹಿತಿ ಇದೆ ಎಂದು ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿದ್ದ ವಕೀಲ ಡಿ.ಪಿ.ಸಿಂಗ್ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಮಿಷೆಲ್ ಸಲ್ಲಿಸಿದ ಅರ್ಜಿಯು ನ್ಯಾಯಸಮ್ಮತವಾಗಿಲ್ಲದ ಕಾರಣ ತಳ್ಳಿಹಾಕಬೇಕು ಎಂದು ಅವರು ಮನವಿ ಮಾಡಿದರು.

ಆರೋಪಪಟ್ಟಿಯನ್ನು ಸೋರಿಕೆ ಮಾಡಿರುವ ಕಾರಣ ‘ಮಾಧ್ಯಮಗಳಲ್ಲಿ ವಿಚಾರಣೆ’ ನಡೆಯುತ್ತಿದೆ ಎಂದು ಮಿಷೆಲ್ ಪರವಾಗಿ ಹಾಜರಾಗಿದ್ದ ವಕೀಲರು ವಾದ ಮಂಡಿಸಿದರು.

ಆರೋಪಪಟ್ಟಿ ಅಂಶಗಳು ಸಾರ್ವಜನಿಕರಿಗೆ ತಿಳಿಯಬಹುದು ಮತ್ತು ಇದನ್ನು ತಿಳಿದುಕೊಳ್ಳುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಏಪ್ರಿಲ್ 12 ರಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ತಿಳಿಸಿತ್ತು.

ಆರೋಪಿಗೆ ನೀಡುವ ಮೊದಲೇ ಆರೋಪಪಟ್ಟಿಯನ್ನು ಮಾಧ್ಯಮಗಳಿಗೆ ನೀಡಲಾಗಿದೆ ಎಂದು ಮಿಷೆಲ್ ಪರ ವಕೀಲರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.