1970ರಿಂದ 2019ರ ಅವಧಿಯಲ್ಲಿ ಜಾಗತಿಕ ಹವಾಮಾನ ಬದಲಾವಣೆ ಕಾರಣದಿಂದಾಗಿ ಪಕ್ಷಿಗಳ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಬದಲಾವಣೆ ಕುರಿತು ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಜಗತ್ತಿನ ಎಲ್ಲಾ ಖಂಡಗಳ 104 ಪಕ್ಷಿ ಪ್ರಭೇದಗಳ 201 ಹೆಣ್ಣು ಪಕ್ಷಿಗಳನ್ನು ಈ ಅಧ್ಯಯನಕ್ಕೆ ಪರಿಣಿಸಲಾಗಿತ್ತು. ಹವಾಮಾನ ಬದಲಾವಣೆಯು ಪಕ್ಷಿಗಳ ಸಂತಾನ ಪ್ರಕ್ರಿಯೆ ಮೇಲೆ ಅಡ್ಡ ಪರಿಣಾಮ ಉಂಟು ಮಾಡಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ ಎಂಬ ನಿಯತಕಾಲಿಕದಲ್ಲಿ (ಪಿಎನ್ಎಎಸ್) ಅಧ್ಯಯನದ ವರದಿ ಪ್ರಕಟಿಸಲಾಗಿದೆ.