ನವದೆಹಲಿ: ಕ್ಲಬ್ಹೌಸ್ ಅಪ್ಲಿಕೇಷನ್ನಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಮತ್ತು ನಿಂದನೀಯ ಚರ್ಚಾಕೂಟಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು, ಒಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಆರು ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಬುಲ್ಲಿ ಬಾಯಿ ಆ್ಯಪ್ನ ನಂತರ ಮಹಿಳೆಯರ ತೇಜೋವಧೆಗೆ ಜನಪ್ರಿಯ ಕ್ಲಬ್ಹೌಸ್ ವೇದಿಕೆಯನ್ನು ಬಳಸಲಾಗಿದೆ.

ಇದನ್ನೂ ಓದಿ:ಕೋವಿಡ್: ರ್ಯಾಲಿ, ರೋಡ್ ಶೋ ನಿಷೇಧ- ಜನವರಿ 31ರವರೆಗೆ ವಿಸ್ತರಣೆ

ಕ್ಲಬ್ಹೌಸ್ ಆ್ಯಪ್ ಚಾಟ್ನ ಕ್ಲಿಪ್ ವೈರಲ್ ಆದ ಬಳಿಕ ಕ್ರಮ ಕೈಗೊಂಡಿರುವ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಕ್ಲಬ್ಹೌಸ್ ಬಳಕೆದಾರರಲ್ಲಿ ಒಬ್ಬರಾದ ಕೇರಳ ಮೂಲದ ಆಂಚಲ್ ಆನಂದ್ ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಅವರು ನಿಜಾಮುದ್ದೀನ್ ನಿವಾಸಿ ರೋಮ ಮಕ್ಕರ್ ಅವರೊಂದಿಗೆ ಸಂಭಾಷಣೆಯಲ್ಲಿ ಭಾಗವಹಿಸಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಚಾಟ್ ರೂಮ್ ಚರ್ಚೆಯ ಸಮಯದಲ್ಲಿ ಇತರೆ ಸದಸ್ಯರು ಮಹಿಳೆಯರ ಬಗ್ಗೆ ಅವಹೇಳನಕಾರಿ ಹಾಗೂ ಅಸಭ್ಯ ಕಾಮೆಂಟ್ಗಳನ್ನು ಮಾಡಿದ್ದಾರೆ. ಆಕೆಯ ಮೊಬೈಲ್ ಫೋನ್ ಹಾಗೂ ನೋಟ್ ಪ್ಯಾಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಯಾವುದೇ ಬಂಧನದ ಮೊದಲು ವಿಡಿಯೊ ರೆಕಾರ್ಡಿಂಗ್ ಮತ್ತು ಧ್ವನಿ ಹೊಂದಾಣಿಕೆಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.