ಪತ್ತನಂತಿಟ್ಟ, ಕೇರಳ: ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಶಾಂತಿಯನ್ನು ಕದಡಲು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಪಾಲರ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

ಪ್ರತಿಭಟನನಿರತ ಎಸ್‌ಎಫ್‌ಐ ಕಾರ್ಯಕರ್ತರನ್ನು ರಾಜ್ಯಪಾಲರು ‘ಕ್ರಿಮಿನಲ್’ ಎಂದು ಉಲ್ಲೇಖಿಸಿದ್ದಾರೆ ಎಂದು ಸುದ್ದಿಗಾರರು ಗಮನಸೆಳೆದಾಗ, ‘ಮನಸ್ಸಿಗೆ ಅನ್ನಿಸಿದ್ದನ್ನು ಹೇಳುವ ಹಂತವನ್ನು ರಾಜ್ಯಪಾಲರು ತಲುಪಿದ್ದಾರೆ’ ಎಂದು ಟೀಕಿಸಿದರು.

‘ಕೇರಳದ ರಾಜ್ಯಪಾಲ ಎಂಬುದನ್ನೇ ಅವರು ಮರೆತಂತಿದೆ. ರಾಜ್ಯಪಾಲರು ರಾಜ್ಯದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಹಿಂದೆಯೂ ಹೇಳಿದ್ದೆ. ಅದನ್ನು ರಾಜ್ಯಪಾಲರು ನಂತರದ ತಮ್ಮ ಕ್ರಿಯೆಗಳ ಮೂಲಕ ಸಾಬೀತುಪಡಿಸುತ್ತಿದ್ದಾರೆ‘ ಎಂದು ಹೇಳಿದರು.

’ಯಾವುದೇ ವಿಷಯವಿರಲಿ. ಆದಷ್ಟು ಪ್ರಚೋದನೆಗೆ ಒಳಪಡಿಸಲು ಅವರು ಯತ್ನಿಸುತ್ತಾರೆ. ಎಸ್‌ಎಫ್‌ಯ ಕಾರ್ಯಕರ್ತರನ್ನು ಕ್ರಿಮಿನಲ್, ಗೂಂಡಾಗಳು ಎನ್ನುತ್ತಾರೆ. ಪ್ರತಿಭಟನಕಾರರ ವಿರುದ್ಧ ಕ್ರೂರ ಪದ ಬಳಕೆ ಹೇಗೆ ಸಾಧ್ಯ‘ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.