ಹೈದರಾಬಾದ್: ಜೈನ ಸಮುದಾಯದ ಬಗ್ಗೆ ಅಪಹಾಸ್ಯ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಬೆದರಿಕೆ ಒಡ್ಡಿದ್ದ ಹಿನ್ನೆಲೆ ಶನಿವಾರ ಸಂಜೆ ಹೈದಾರಾಬಾದ್ನಲ್ಲಿ ನಡೆಯಬೇಕಿದ್ದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಡೇನಿಯಲ್ ಫರ್ನಾಂಡಿಸ್ ಅವರ ಶೋ ರದ್ದಾಗಿದೆ ಎಂದು ವರದಿಯಾಗಿದೆ.

ಶೋ ರದ್ದಾಗಿರುವ ಕುರಿತು ವಿಡಿಯೊದಲ್ಲಿ ಮಾತನಾಡಿರುವ ಡೇನಿಯಲ್, ‘ಪ್ರೇಕ್ಷಕರು, ಸಿಬ್ಬಂದಿ ಮತ್ತು ನನ್ನ ಸುರಕ್ಷತೆಯ ಬಗ್ಗೆ ಖಾತರಿಪಡಿಸಲು ಯಾರೂ ಸಿದ್ದರಿರಲಿಲ್ಲ. ನಾನು ಹೇಳಿದ ಯಾವುದೊ ಒಂದು ಹೇಳಿಕೆಗೆ ಇತರರ ಜೀವವನ್ನು ಅಪಾಯಕ್ಕೆ ಒಡ್ಡಲು ನಾನು ತಯಾರಿಲ್ಲ’ ಎಂದಿದ್ದಾರೆ.

‘ಕಲಾವಿದರ ಕೆಲಸಗಳನ್ನು ಇಷ್ಟಪಡಲೇಬೇಕೆಂದಿಲ್ಲ. ಆದರೆ ಕಲಾವಿದನೊಬ್ಬನ ಕೆಲಸ ತನಗೆ ಹಿಡಿಸಲಿಲ್ಲ ಎಂದು ಆತನ ಮೇಲೆ ಹಿಂಸೆಯನ್ನು ಪ್ರಚೋದಿಸುವುದು ತಪ್ಪು. ಯಾರನ್ನು ನಿಂದಿಸುವ ಉದ್ದೇಶ ನನಗಿರಲಿಲ್ಲ’ ಎಂದು ಹೇಳಿದರು.

ಇದಕ್ಕೂ ಮುನ್ನ ವಿಡಿಯೊ ಸಂದೇಶದಲ್ಲಿ ಮಾತನಾಡಿದ್ದ ರಾಜಾ ಸಿಂಗ್, ‘ಜೈನ ಸಮುದಾಯದ ಮೇಲೆ ಹಾಸ್ಯ ಮಾಡಿದ ಡೇನಿಯಲ್ ಅವರ ಶೋ ರದ್ದು ಮಾಡುವಂತೆ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡುತ್ತೇನೆ. ಇಲ್ಲದಿದ್ದರೆ ಹೈದರಾಬಾದ್ ಅಥವಾ ತೆಲಂಗಾಣಕ್ಕೆ ಭೇಟಿ ನೀಡಲು ಐವತ್ತು ಬಾರಿ ಯೋಚಿಸುವಂತೆ ನಮ್ಮ ಕಾರ್ಯಕರ್ತರು ಬುದ್ಧಿ ಕಲಿಸಲಿದ್ದಾರೆ. ಜೈನ ಮತ್ತು ಹಿಂದೂ ಧರ್ಮವನ್ನು ಗೇಲಿ ಮಾಡುವವರಿಗೆ ನಾವು ಏನು ಮಾಡುತ್ತೇವೆ ಎಂದು ಇತಿಹಾಸ ನೆನಪಿಟ್ಟುಕೊಳ್ಳಲಿದೆ’ ಎಂದಿದ್ದರು.

ಇತ್ತೀಚೆಗೆ ಮುಸ್ಲಿಮರ ವೇಷ ಹಾಕಿ ಬಕ್ರೀದ್ ಕುರಿಗಳನ್ನು ರಕ್ಷಿಸಿದ್ದ ಜೈನ ಸಮುದಾಯದವರ ಬಗ್ಗೆ ಡೇನಿಯಲ್ ಹಾಸ್ಯ ಮಾಡಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.