ಜೋಧಪುರ: ರಾಜಸ್ಥಾನದ ನೀರಿನ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ಬಜೆಟ್ ಮಂಜೂರಾಗಿದೆ. ಆದರೆ, ರಾಜ್ಯದಲ್ಲಿನ ಹಿಂದಿನ ಕಾಂಗ್ರೆಸ್ ಸರ್ಕಾರ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.

‘ನೀರಿಗಾಗಿ ಸಾವಿರಾರು ಕೋಟಿ ಬಜೆಟ್ ಅನ್ನು ರಾಜಸ್ಥಾನ ಸರ್ಕಾರಕ್ಕೆ ನಿಗದಿಗೊಳಿಸಲಾಗಿದೆ. ಸರ್ಕಾರ ಕೆಲಸ ಮಾಡದಿದ್ದರೆ, ನಾನೇನು ಮಾಡಲಿ?. ಕೇಂದ್ರ ಸರ್ಕಾರಕ್ಕೂ ಅದರದೇ ಆದ ಮಿತಿಗಳಿವೆ. ನೀರಿನ ವಿಷಯ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದೆ. ನೀರಿಗೆ ಸಂಬಂಧಪಟ್ಟ ವಿಷಯಗಳ ಮೇಲೆ ಕೆಲಸ ಮಾಡುವುದು ಅವರ ಜವಾಬ್ದಾರಿಯಾಗಿದೆ. ಆದರೆ, ಅವರು ಕೆಲಸ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದರು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಪೋಖ್ರಾನ್ನ ಅಜಸರ್ ಗ್ರಾಮದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶೇಖಾವತ್, ‘ಕೇಂದ್ರ ಜಲಶಕ್ತಿ ಸಚಿವರಾಗಿದ್ದರೂ ಈ ಪ್ರದೇಶಕ್ಕೆ ನೀರು ಪೂರೈಸಿಲ್ಲ ಎಂಬ ಕಾಂಗ್ರೆಸ್ ಅಭ್ಯರ್ಥಿ ಕರಣ್ ಸಿಂಗ್ ಆರೋಪಕ್ಕೆ ಬಿಜೆಪಿ ಕಾರ್ಯಕರ್ತರೂ ಧ್ವನಿಗೂಡಿಸಿರುವುದು ಬೇಸರವನ್ನುಂಟು ಮಾಡಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.