ಗಿರಿದಿಹ್(ಜಾರ್ಖಂಡ್): ಕಾಂಗ್ರೆಸ್ ಪಕ್ಷವು ನಾಚಿಕೆಗೇಡಿನ ರಾಜಕೀಯದಲ್ಲಿ ತೊಡಗಿದ್ದು, ಬಾಲರಾಮನನ್ನು ಮತ್ತೆ ಟೆಂಟ್ಗೆ ಕಳುಹಿಸಲು ಪಿತೂರಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಜೆಎಂಎಂ. ಕಾಂಗ್ರೆಸ್ ಮತ್ತು ಇಂಡಿಯಾ ಬಣ ಭ್ರಷ್ಟಾಚಾರ, ತುಷ್ಟೀಕರಣದ ರಾಜಕಾರಣ ಮತ್ತು ವಂಶಪಾರಂಪರ್ಯ ರಾಜಕಾರಣಕ್ಕೆ ದೊಡ್ಡ ಮಾದರಿಗಳಾಗಿವೆ ಎಂದು ಆರೋಪಿಸಿದ ಅವರು,ಈ ಎಲ್ಲ ದುರಾಚಾರಗಳಿಂದ ದೇಶವನ್ನು ಮುಕ್ತಗೊಳಿಸಿದ್ದೇನೆ ಎಂದಿದ್ದಾರೆ.

ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ರಾಮ ಮಂದಿರದ ಕುರಿತಂತೆ ಕಾಂಗ್ರೆಸ್ ನಾಯಕರು ನಾಚಿಕೆಗೇಡಿನ ಹೇಳಿಕೆ ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮಾತನಾಡುತ್ತಿರುವ ಅವರು, ಬಾಲರಾಮನನ್ನು ಮತ್ತೆ ಟೆಂಟ್ಗೆ ಕಳುಹಿಸಲು ಸಂಚು ಮಾಡಿದ್ದಾರೆ’ಎಂದು ದೂರಿದರು.

ಅಯೋಧ್ಯೆಗೆ ಮತ್ತೆ ಬೀಗ ಜಡಿಯಲು ಪ್ರಯತ್ನಿಸುತ್ತಿರುವ ಭ್ರಷ್ಟ ಶಕ್ತಿಗಳನ್ನು ಹೊರದೂಡಿ ಎಂದು ಕರೆ ನೀಡಿದ್ದಾರೆ.

ಕಾಂಗ್ರೆಸ್ ದೇಶವನ್ನು ನಕ್ಸಲಿಸಂನತ್ತ ದೂಡುತ್ತದೆ. ಮೂರನೇ ಬಾರಿಗೆ ಪ್ರಧಾನಿಯಾದರೆ, ದೇಶದಿಂದ ನಕ್ಸಲಿಸಂ ಮತ್ತು ಭಯೋತ್ಪಾದನೆಯನ್ನು ತೊಡೆದುಹಾಕುತ್ತೇನೆ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ಸ್ಥಾನಮಾನ ಹಿಂಪಡೆದಿದ್ದು, ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಸೋಮವಾರ ಜಮ್ಮು ಮತ್ತು ಕಾಶ್ಮೀರದ ಜನ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.