ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 48 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.

ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಸಾಕೋಲಿ ಕ್ಷೇತ್ರದಿಂದ, ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರನ್ನು ಕರಾಡ್ ದಕ್ಷಿಣದಿಂದ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಅವರನ್ನು ಬ್ರಹ್ಮಪುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಮಾಜಿ ಸಚಿವರಾದ ನಿತಿನ್ ರಾವುತ್ ಮತ್ತು ಬಾಳಾಸಾಹೇಬ್ ಥೋರಟ್ ಅವರಿಗೆ ಕ್ರಮವಾಗಿ ನಾಗ್ಪುರ ಉತ್ತರ ಮತ್ತು ಸಂಗಮ್ನೇರ್ನಿಂದ, ಧಾರಾವಿಯಿಂದ ಜ್ಯೋತಿ ಏಕನಾಥ್ ಗಾಯಕ್ವಾಡ್, ಲಾತೂರ್ ನಗರದಿಂದ ಅಮಿತ್ ದೇಶಮುಖ್ ಹಾಗೂ ಲಾತೂರ್ ಗ್ರಾಮಾಂತರದಿಂದ ಧೀರಜ್ ದೇಶಮುಖ್ ಅವರನ್ನು ಕಣಕ್ಕಿಳಿಸಿದೆ.

ಚಾಂದಿವಲಿಯಿಂದ ಮೊಹಮ್ಮದ್ ಆರಿಫ್ ನಸೀಮ್ ಖಾನ್, ಮಲಾಡ್ ಪಶ್ಚಿಮದಿಂದ ಅಸ್ಲಾಂ ಶೇಖ್, ದೇವೋಲಿಯಿಂದ ರಂಜಿತ್ ಕಾಂಬ್ಳೆ ಮತ್ತು ನಾಗ್ಪುರ ಪಶ್ಚಿಮದಿಂದ ವಿಕಾಸ್ ಠಾಕ್ರೆ ಅವರನ್ನು ಕಣಕ್ಕಿಳಿದಿದ್ದಾರೆ.

ಎಂವಿಎ ಮೈತ್ರಿಕೂಟದಲ್ಲಿ ಮೂರು ಪ್ರಮುಖ ಪಕ್ಷಗಳಿಗೆ ಸೀಟು ಹಂಚಿಕೆ ಸೂತ್ರದ ಪ್ರಕಾರ ಕಾಂಗ್ರೆಸ್ 85 ಸ್ಥಾನಗಳಿಗೆ ಸ್ಪರ್ಧಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.