ಆರೋಪ ಸುಳ್ಳು ಎಂದ ಮಹಿಂದ್ರಾ ಕಂಪನಿ
ನಮ್ಮ ಕಂಪನಿಗೆ ಅನುಕೂಲ ಮಾಡಿಕೊಡಿ ಎಂದು ನಾವು ಸೆಬಿಗೆ ಎಂದಿಗೂ ಮನವಿ ಮಾಡಿಲ್ಲ. ಪೂರೈಕೆ ವ್ಯವಸ್ಥೆಯಲ್ಲಿ ಧವಳ್ ಬುಚ್ ಅವರಿಗೆ ಇರುವ ಪರಿಣತಿಯ ಕಾರಣಕ್ಕಾಗಿ ಅವರನ್ನು 2019ರಲ್ಲಿ ನೇಮಕ ಮಾಡಿಕೊಂಡೆವು. ಮಾಧವಿ ಅವರು ಸೆಬಿಯ ಅಧ್ಯಕ್ಷೆಯಾಗುವ ಮೂರು ವರ್ಷ ಮೊದಲೇ ಧವಳ್ ಅವರು ನಮ್ಮ ಕಂಪನಿ ಸೇರಿಕೊಂಡಿದ್ದರು. ಅವರ ಕೆಲಸಕ್ಕಾಗಿ ನಾವು ಅವರಿಗೆ ಸಂಬಳ ನೀಡಿದ್ದೇವೆಯಷ್ಟೇ. ಕಂಪನಿ ಪರವಾಗಿ ಸೆಬಿಯು ಐದು ಅನುಮೋದನೆಗಳನ್ನು ನೀಡಿದೆ ಎಂದು ಆರೋಪಿಸಲಾಗಿದೆ. ಆದರೆ ಇವೆಲ್ಲವೂ ಸುಳ್ಳು. ಐದರಲ್ಲಿ ಮೂರು ಅನುಮೋದನೆಗಳು ನಮ್ಮ ಕಂಪನಿಗೆ ಅಥವಾ ನಮ್ಮ ಗ್ರೂಪ್‌ನ ಇತರೆ ಕಂಪನಿಗಳಿಗೆ ಸಂಬಂಧಿಸಿದವಲ್ಲ. ಸೆಬಿ ನೀಡಿದ ಒಂದು ಅನುಮೋದನೆಯು 2018ರ ಮಾರ್ಚ್‌ನಲ್ಲಿ ಬಂದಿದ್ದು. ಆಗಿನ್ನು ಧವಳ್ ಅವರು ನಮ್ಮ ಕಂಪನಿಯೊಂದಿಗೆ ಇರಲೇ ಇಲ್ಲ.–ಮಹಿಂದ್ರಾ ಆ್ಯಂಡ್ ಮಹಿಂದ್ರಾ ಗ್ರೂಪ್
ತಮ್ಮ ಸ್ನೇಹಿತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಮೋದಿ–ಶಾ ಸಮಿತಿ ಮಾಧವಿ ಅವರನ್ನು ಸೆಬಿ ಅಧ್ಯಕ್ಷೆಯನ್ನಾಗಿ ನೇಮಿಸಿದೆಯೇ ಅಥವಾ ಮಾಧವಿ ಅವರ ಅಕ್ರಮ ಹಣಕಾಸಿನ ವ್ಯವಹಾರದ ಕುರಿತು ಅವರಿಗೆ ಮಾಹಿತಿ ಇರಲಿಲ್ಲವೇ? ನೋಂದಾಯಿತ ಕಂಪನಿಗಳ ಕುರಿತು ಮಾಧವಿ ಅವರು ನೀಡಿದ ಅನುಮೋದನೆಗಳು, ಆದೇಶಗಳು ಅವರ ಗ್ರಾಹಕ ಕಂಪನಿಗಳಿಂದ ಪಡೆದ ಆದಾಯದ ಆಧಾರದಲ್ಲಿ ತೆಗೆದುಕೊಂಡಿರುವುದೇ?–ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಈ ಹಿಂದಿನ ಪತ್ರಿಕಾಗೋಷ್ಠಿಗಳಲ್ಲಿ ನಾನು ಇದೊಂದು ಹಿತಾಸಕ್ತಿ ಸಂರ್ಘಷದ ವಿಚಾರ ಎಂದಿದ್ದೆ. ಈಗ ಇದೊಂದು ಭ್ರಷ್ಟಾಚಾರದ ವಿಚಾರ ಎಂದು ಹೇಳಿದ ರಷ್ಟೇ ಸಾಲುವುದಿಲ್ಲ. ಬದಲಿಗೆ ಇದೊಂದು ಕ್ರಿಮಿನಲ್ ಸಂಚು. ಉದ್ದೇಶ ಪೂರ್ವಕವಾಗಿಯೇ ಹಲವು ಮಾಹಿತಿಗಳನ್ನು ಮಾಧವಿ ಅವರು ಮುಚ್ಚಿಟ್ಟಿ ದ್ದಾರೆ. ಉದ್ದೇಶಪೂರ್ವಕವಾಗಿಯೇ ಅವರು ಹಲವು ಸುಳ್ಳು ಹೇಳಿದ್ದಾರೆ..–ಪವನ್ ಖೇರಾ, ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.