ಶ್ರೀನಗರ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಶಶಿ ತರೂರ್ ಜೊತೆಗಿನ ತಮ್ಮ ಸ್ಪರ್ಧೆ ದೇಶ ಮತ್ತು ಕಾಂಗ್ರೆಸ್ ಅಭಿವೃದ್ಧಿಗೆ ಮತ್ತೊಂದು ಆಯಾಮ ನೀಡಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಎಐಸಿಸಿ ಚುನಾವಣೆ ಬೆನ್ನಲ್ಲೇ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖರ್ಗೆ, ‘ಇದೊಂದು ಆಂತರಿಕ ಚುನಾವಣೆ. ಇದು ಮನೆಯಲ್ಲಿನ ಇಬ್ಬರು ಸಹೋದರರು ಕಿತ್ತಾಡದೆ, ಅವರ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಪ್ರಯತ್ನಿಸಿದಂತೆ’ ಎಂದರು.

ಈ ಚುನಾವಣೆ ಪ್ರಚಾರ ವ್ಯಕ್ತಿಯೊಬ್ಬ ಪಕ್ಷದ ಅಧ್ಯಕ್ಷರಾದರೆ ಏನು ಮಾಡುತ್ತಾರೆ ಎಂಬ ಕುರಿತಾಗಿ ಅಲ್ಲ. ಬದಲಿಗೆ ಒಟ್ಟಾಗಿ ಏನು ಮಾಡಬಹುದು ಎಂಬ ಕುರಿತು. ಪಕ್ಷ ಮತ್ತು ‘ದೇಶಕ್ಕಾಗಿ ನಾವೆಲ್ಲ ಒಟ್ಟಾಗಿ ಏನು ಮಾಡುತ್ತೇವೆ ಎಂಬುದು ಮಹತ್ವದ್ದು. ನಾವೆಲ್ಲ ಒಟ್ಟಾಗಿ ಪಕ್ಷದ ಒಳಿತಿಗಾಗಿ ದುಡಿಯಬೇಕಿದೆ’ ಎಂದು ಖರ್ಗೆ ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯ ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿದುಕೊಂಡಿದ್ದಾರೆ. ಪ್ರತಿ ರಾಜ್ಯದ ರಾಜಧಾನಿಯಲ್ಲಿ ಇದೇ 17ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಇದೇ 19ರಂದು ಮತಎಣಿಕೆ ನಡೆಸಿ, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.