ನವದೆಹಲಿ: ಜಾಗತಿಕ ಟೆಕ್ ಕಂಪನಿ ಮೈಕ್ರೊಸಾಫ್ಟ್ನ ವಿಂಡೋಸ್ನಲ್ಲಿ ಶುಕ್ರವಾರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಭಾರತ, ಅಮೆರಿಕ ಸೇರಿ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಲಕ್ಷಾಂತರ ಬಳಕೆದಾರರು ತೊಂದರೆಗೆ ಸಿಲುಕಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸರ್ಕಾರಿ ಕಚೇರಿಗಳು, ಮಾಧ್ಯಮ ಸಂಸ್ಥೆಗಳು, ಬ್ಯಾಂಕ್ಗಳು ಹಾಗೂ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯವಾಗಿದೆ. ಅದರಲ್ಲೂ ವಿಮಾನಯಾನ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಸೇವೆಯು ಅಸ್ತವ್ಯಸ್ತ ಗೊಂಡಿದೆ. ಮೈಕ್ರೊಸಾಫ್ಟ್ನ 365 ಆ್ಯಪ್ಗಳು ಮತ್ತು ಸೇವೆಗಳು ಸ್ಥಗಿತಗೊಂಡಿವೆ.

ಬಳಕೆದಾರರು ಕಂಪ್ಯೂಟರ್ ಹಾಗೂ ಲ್ಯಾಪ್ಟಾಪ್ ತೆರೆದಾಗ ನೀಲಿ ಬಣ್ಣದ ಹಿಂಪರದೆಯಲ್ಲಿ ಎರರ್ ಸಂದೇಶ ಕಾಣಿಸಿಕೊಂಡಿದೆ. ವಿಂಡೋಸ್ನ ಈ ದೋಷದ ಬಗ್ಗೆ ‘ಬ್ಲೂ ಸ್ಕ್ರೀನ್ ಆಫ್ ಡೆತ್’ (ಬಿಎಸ್ಒಡಿ) ಎಂದು ಕರೆಯಲಾಗುತ್ತದೆ. ಇದರಿಂದ ಕಂಪ್ಯೂಟರ್ಗಳು ಏಕಾಏಕಿ ಸ್ಥಗಿತ ಅಥವಾ ರಿಸ್ಟಾರ್ಟ್ ಆಗುತ್ತವೆ. ಮೈಕ್ರೊಸಾಫ್ಟ್ನ ಕ್ಲೌಡ್ ಸೇವೆಯಲ್ಲಿನ ಸಮಸ್ಯೆಯಿಂದಾಗಿ ಈ ತೊಂದರೆ ಎದುರಾಗಿದೆ ಎಂದು
ಹೇಳಲಾಗಿದೆ.

ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ಸಮಸ್ಯೆಯಿಲ್ಲ: ಜಾಗತಿಕ ಮಟ್ಟದಲ್ಲಿ ಬ್ಯಾಂಕ್ಗಳು ಮತ್ತು ಪೇಮೆಂಟ್ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಆದರೆ, ಭಾರತದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ.

‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೇವೆಗೆ ಯಾವುದೇ ತೊಂದರೆಯಾಗಿಲ್ಲ. ಸುಸೂತ್ರವಾಗಿ ಕಾರ್ಯ ನಿರ್ವಹಿಸಲಾಗಿದೆ’ ಎಂದು ಎಸ್ಬಿಐ ಅಧ್ಯಕ್ಷ ದಿನೇಶ್ ಖಾರಾ ಹೇಳಿದ್ದಾರೆ.

‘ದೇಶದಲ್ಲಿ ಜನಪ್ರಿಯವಾಗಿರುವ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೇಲೂ ಪರಿಣಾಮ ಬೀರಿಲ್ಲ’ ಎಂದು ರಾಷ್ಟ್ರೀಯ ಪಾವತಿ ನಿಗಮದ (ಎನ್ಪಿಸಿಐ) ಸಿಇಒ ದಿಲೀಪ್ ಅಸ್ಬೆ
ತಿಳಿಸಿದ್ದಾರೆ.

ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ಗಳು ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಪಷ್ಟಪಡಿಸಿವೆ.

‘ದೇಶದ 10 ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ ವಹಿವಾಟಿ ನಲ್ಲಿ ಸಣ್ಣ ಪ್ರಮಾಣದ ತೊಂದರೆಯಾಗಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಿಳಿಸಿದೆ.

ರಾಷ್ಟ್ರೀಯ ಷೇರು ವಿನಿಮಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ.

ಸಮಸ್ಯೆಗೆ ಕಾರಣ ಏನು?

ಕುತಂತ್ರಾಂಶ ಸೇರಿ ಇತರೆ ಸೈಬರ್ ದಾಳಿ ತಡೆಯಲು ಕ್ರೌಡ್ಸ್ಟ್ರೈಕ್ ಕಂಪನಿಯು ಫಾಲ್ಕನ್ ಸೆನ್ಸಾರ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.
ವಿಂಡೋಸ್ನಲ್ಲಿ ಇದರ ಅಪ್ಡೇಟ್ ಮಾಡುವಾಗ ದೋಷ ಕಾಣಿಸಿಕೊಂಡಿದೆ. ಈ ಎರಡರ ನಡುವೆ ಹೊಂದಾಣಿಕೆಯಾಗಿಲ್ಲ. ಹಾಗಾಗಿ, ಮೈಕ್ರೊಸಾಫ್ಟ್ ಸೇವೆ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.

‘ಜಾಗತಿಕ ಮಟ್ಟದಲ್ಲಿ ಆಗಿರುವ ತೊಂದರೆ ಬಗ್ಗೆ ನಮಗೆ ಅರಿವಿದೆ. ಥರ್ಡ್ಪಾರ್ಟಿ ತಂತ್ರಾಂಶದ ಅಪ್ಡೇಟ್ನಿಂದಾಗಿ ವಿಂಡೋಸ್ನಲ್ಲಿ ದೋಷ ಕಾಣಿಸಿಕೊಂಡಿದೆ. ಸಮರೋಪಾದಿಯಲ್ಲಿ ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ಕೆಲಸ ನಡೆಯುತ್ತಿದೆ’ ಎಂದು ಮೈಕ್ರೊಸಾಫ್ಟ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಕಂಪನಿ ಜತೆ ಸಂಪರ್ಕ

‘ಮೈಕ್ರೊಸಾಫ್ಟ್ ಕಂಪನಿ ಜೊತೆಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಿರಂತರವಾಗಿ ಸಂಪರ್ಕದಲ್ಲಿದೆ’ ಎಂದು ಕೇಂದ್ರ ಐ.ಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

‘ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ನೆಟ್ವರ್ಕ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮೈಕ್ರೊಸಾಫ್ಟ್ ಕಂಪನಿಯು ಸಮಸ್ಯೆಯನ್ನು ಪತ್ತೆ ಹಚ್ಚಿದ್ದು, ಬಗೆಹರಿಸಲು ಮುಂದಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಕಂಪನಿ ಜತೆ ನಿರಂತರ ಸಂಪರ್ಕ

ಮೈಕ್ರೊಸಾಫ್ಟ್ ಕಂಪನಿ ಜೊತೆಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ಕೇಂದ್ರ ಐ.ಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

‘ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ನೆಟ್ವರ್ಕ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮೈಕ್ರೊಸಾಫ್ಟ್ ಕಂಪನಿಯು ಸಮಸ್ಯೆಯನ್ನು ಪತ್ತೆ ಹಚ್ಚಿದ್ದು, ಬಗೆಹರಿಸಲು ಮುಂದಾಗಿದೆ’ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.