ನವದೆಹಲಿ: ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಗುರುವಾರ) ಕಟ್ಟಡ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಪೊಲೀಸರು ಮತ್ತು ಸಂಸತ್ತಿನ ಭದ್ರತಾ ಸಿಬ್ಬಂದಿ ಸಂಕೀರ್ಣಕ್ಕೆ ಪ್ರವೇಶಿಸುವವರ ಗುರುತಿನ ಚೀಟಿಯನ್ನು ಪರಿಶೀಲಿಸುತ್ತಿದ್ದಾರೆ.

ಸಂಸತ್ ಸಂಕೀರ್ಣದಿಂದ ಕೆಲವೇ ಮೀಟರ್ ದೂರದಲ್ಲಿರುವ ಸಾರಿಗೆ ಭವನದ ಹೊರಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿ, ಗುರುತಿನ ಚೀಟಿ ಪರಿಶೀಲಿಸದ ಹೊರತು ಯಾರನ್ನೂ ಬ್ಯಾರಿಕೇಡ್ ದಾಟಿ ಹೋಗಲು ಅನುಮತಿ ನೀಡುತ್ತಿಲ್ಲ.
.ಸಂಸತ್ನಲ್ಲಿ ಭದ್ರತಾ ಲೋಪ: ಯುಎಪಿಎ ಅಡಿ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರನ್ನು ಮಕರ ದ್ವಾರದಿಂದ ಹೊಸ ಕಟ್ಟಡಕ್ಕೆ ಪ್ರವೇಶಿಸಲು ಅನುಮತಿಸಿಲ್ಲ. ಸಂಗ್ಮಾ ತನ್ನ ಕಾರಿನಿಂದ ಇಳಿದು ಕಟ್ಟಡವನ್ನು ಪ್ರವೇಶಿಸಲು ಶಾರ್ದೂಲ್ ದ್ವಾರಕ್ಕೆ ತೆರಳಿದರು. ಪಾಸ್ ಇಲ್ಲದ ಸದಸ್ಯರ ಚಾಲಕರಿಗೆ ಸಂಕೀರ್ಣದೊಳಗೆ ಪ್ರವೇಶ ನಿರಾಕರಿಸಲಾಗಿದೆ.

ಸಂಸತ್ ಸಂಕೀರ್ಣ ಪ್ರವೇಶ ದ್ವಾರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡುವಂತೆ ತಿಳಿಸಿದ್ದಾರೆ. ಹಳೆಯ ಸಂಸತ್ ಭವನದ ಗೇಟ್ ಸಂಖ್ಯೆ 12ರ ಬಳಿಯಿರುವ ಉದ್ಯಾನಕ್ಕೆ ಮಾಧ್ಯಮದವರನ್ನು ಸ್ಥಳಾಂತರಿಸಲಾಗಿದ್ದು, ಮಕರ ದ್ವಾರದ ಮೂಲಕ ಯಾರೊಬ್ಬರೂ ಹೊಸ ಸಂಸತ್ ಭವನ ಪ್ರವೇಶಿಸದಂತೆ ಅನುಮತಿ ನಿರಾಕರಿಸಲಾಗಿದೆ.
.ಸಂಸತ್ತಿನಲ್ಲಿ ಭದ್ರತಾ ವೈಫಲ್ಯ: ಉಭಯ ಸದನಗಳಲ್ಲಿ ಚರ್ಚೆಗೆ ಕಾಂಗ್ರೆಸ್ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.