‘ನಾರಿ ಶಕ್ತಿ ವಂದನ್ ಅಧಿನಿಯಂ’ ಬೆಂಬಲಿಸಲು ಇಲ್ಲಿ ನಿಂತಿದ್ದೇನೆ. ಅಡುಗೆ ಮನೆಯಿಂದ ಕ್ರೀಡಾಂಗಣದವರೆಗೆ ಭಾರತೀಯ ಮಹಿಳೆಯ ಪ್ರಯಾಣ ಸುದೀರ್ಘವಾಗಿದೆ.
-ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ
ಸರ್ಕಾರ (ಮತ್ತು ಸಮಾಜ) ಮಹಿಳೆಯರಿಗೆ ನಮಸ್ಕಾರ ಮಾಡುವುದು ಹಾಗೂ ಪೂಜಿಸುವುದನ್ನು ನಿಲ್ಲಿಸಿ, ಸಮಾನ ಅವಕಾಶ ನೀಡಬೇಕು. ನಮ್ಮನ್ನು ತಾಯಿ, ಸಹೋದರಿ ಅಥವಾ ಹೆಂಡತಿ ಎನ್ನುವುದು ಇಷ್ಟವಿಲ್ಲ. ಸಮಾನವಾಗಿ ಗೌರವಿಸಬೇಕೆಂದು ಬಯಸುತ್ತೇವೆ.
-ಕನಿಮೊಳಿ, ಡಿಎಂಕೆ ಸಂಸದೆ
ನಾವು ಸಂವಿಧಾನವನ್ನು ಉಲ್ಲಂಘಿಸಬೇಕೆಂದು ಅವರು (ಪ್ರತಿಪಕ್ಷಗಳು) ಬಯಸುತ್ತಾರೆಯೇ? ಧರ್ಮಾಧಾರಿತ ಕೋಟಾ ಕೇಳುವ ಮೂಲಕ ಕಾಂಗ್ರೆಸ್ ದೇಶವನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ.
-ಸ್ಮೃತಿ ಇರಾನಿ, ಕೇಂದ್ರ ಸಚಿವೆ
ಜನಗಣತಿ, ಕ್ಷೇತ್ರಮರುವಿಂಗಡಣೆ ಆರಂಭಿಸಲು ದಿನಾಂಕವನ್ನು ನಿಗದಿಪಡಿಸಿಲ್ಲ. ಹೀಗಾಗಿ ಶೇ 33ರಷ್ಟು ಮಹಿಳಾ ಸಂಸದರು ಲೋಕಸಭೆಯಲ್ಲಿ ಯಾವಾಗ ಕುಳಿತುಕೊಳ್ಳುತ್ತಾರೆ ಎಂಬುದಕ್ಕೆ ಖಚಿತತೆ ಇಲ್ಲ