ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ₹ 8.36 ಗಳಷ್ಟು ಕಡಿಮೆಯಾಗಲಿದ್ದು, ದೆಹಲಿ ಸರ್ಕಾರವು ಮೇ ತಿಂಗಳಲ್ಲಿ ತೆಗೆದುಕೊಂಡ ಇಂಧನ ಮೇಲಿನ ತೆರಿಗೆಯನ್ನು ಹೆಚ್ಚಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಡಿತಗೊಳಿಸಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಡೀಸೆಲ್ ಮೇಲಿನ ವ್ಯಾಟ್ ದರವನ್ನು ಶೇ 30 ರಿಂದ 16.75 ಕ್ಕೆ ಕಡಿತಗೊಳಿಸುವುದಾಗಿ ಎಂದು ಘೋಷಿಸಿದರು. ಇಂದು ಬೆಳಿಗ್ಗೆ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

'ಬುಧವಾರ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ₹ 82 ಇತ್ತು. ಆದರೆ ವ್ಯಾಟ್ ಕಡಿತದ ನಂತರ, ಪ್ರತಿ ಲೀಟರ್ಗೆ ₹ 73.64 ಗಳಾಗಿರುತ್ತದೆ'. ಈ ಕ್ರಮವು ಆರ್ಥಿಕತೆಯನ್ನು ಮತ್ತೆ ಸುಧಾರಿಸಲು ಮಹತ್ವದ ಹೆಜ್ಜೆಯಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ದೆಹಲಿ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇ 27 ರಿಂದ 30ಕ್ಕೆ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ 16.75 ರಿಂದ 30ಕ್ಕೆ ಹೆಚ್ಚಿಸಿತ್ತು. ಕೊರೊನಾದಿಂದ ಲಾಕ್ಡೌನ್ ಜಾರಿಯಿಂದಾಗಿ ಆರ್ಥಿಕತೆಯು ಸಂಪೂರ್ಣ ಸ್ಥಗಿತಗೊಳ್ಳಬೇಕಾಗಿದ್ದರಿಂದಾಗಿ ಆದಾಯವನ್ನು ಗಳಿಸುವ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಆರ್ಥಿಕತೆಯನ್ನು ಮರಳಿ ತಹಬದಿಗೆ ತರುವುದೇ ಈಗ ನಮ್ಮ ಮುಂದಿರುವ ಮುಖ್ಯ ಸವಾಲಾಗಿದೆ. ಅನೇಕ ವ್ಯವಹಾರಗಳು ಮುಚ್ಚಲ್ಪಟ್ಟಿವೆ, ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಹೀಗಾಗಿ ವ್ಯಾಟ್ ಅನ್ನು ಕಡಿಮೆ ಮಾಡುವ ಈ ನಿರ್ಧಾರವು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ. ಡೀಸೆಲ್ ಮೇಲಿರುವ ಹೆಚ್ಚಿನ ಬೆಲೆಯಿಂದಾಗಿ ಕಷ್ಟ ಎದುರಿಸುತ್ತಿದ್ದೇವೆ ಎಂದು ವ್ಯಾಪಾರ ಸಂಸ್ಥೆಗಳು ತಿಳಿಸಿದ್ದವು ಎಂದು ಕೇಜ್ರಿವಾಲ್ ಗುರುವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.