ನವದೆಹಲಿ: ಇಲ್ಲಿನ ಲುಟಿಯೆನ್ಸ್ ಪ್ರದೇಶದಲ್ಲಿರುವ ಔರಂಗಜೇಬ್ ಮಾರ್ಗಕ್ಕೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಮಾರ್ಗ ಎಂದು ಮರುನಾಮಕರಣ ಮಾಡಲಾಗಿದೆ.

ಮರುನಾಮಕರಣ ಮಾಡಿರುವ ಈ ಮಾರ್ಗವು ಮಧ್ಯ ದೆಹಲಿಯ ಪೃಥ್ವಿರಾಜ್ ರಸ್ತೆಯೊಂದಿಗೆ ಅಬ್ದುಲ್ ಕಲಂ ರಸ್ತೆಗೂ ಸಂಪರ್ಕ ಕಲ್ಪಿಸುತ್ತದೆ.

ಅಬ್ದುಲ್ ಕಲಾಂ ಅವರ ಹೆಸರಿರುವ ಫಲಕವನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಗುರುವಾರ ಸ್ಥಾಪಿಸಿದೆ ಎಂದು ಮೂಲಗಳು ತಿಳಿಸಿವೆ.

ಈಚೆಗೆ ನಡೆದ ಎನ್ಡಿಎಂಸಿ ಸಭೆಯಲ್ಲಿ ರಸ್ತೆ ಮರುನಾಮಕರಣಕ್ಕೆ ಅನುಮೋದನೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.