ನವದೆಹಲಿ: ವಾಯು ಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ದೆಹಲಿ ಹಾಗೂ ಎನ್ಸಿಆರ್ನಲ್ಲಿ ವಾಯು ಶುದ್ಧೀಕರಣ ಉಪಕರಣ ಹಾಗೂ ಮಾಸ್ಕ್ಗಳಿಗೆ ಬೇಡಿಕೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹಾಗೂ ಫಾರ್ಮಾಸಿಸ್ಟ್ಗಳು ಹೇಳಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ವಾಯು ಗುಣಮಟ್ಟ ಪ್ರಮಾಣ 450 ದಾಟಿದ್ದು, ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಯನ್ನು ಸೃಷ್ಠಿಸಿದೆ.
.ಮುಂಬೈ, ದೆಹಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಟಾಕಿ ನಿಷೇಧ: BCCI ಕಾರ್ಯದರ್ಶಿ .
‘ಕಳೆದೆರಡು ದಿನಗಳಿಂದ ವಾಯು ಶುದ್ಧೀಕರಣ ಉಪಕರಣಗಳಿಗೆ ಶೇ 20–25ರಷ್ಟು ಬೇಡಿಕೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ವಾಯುಗುಣಮಟ್ಟ ಕ್ಷೀಣಿಸುತ್ತಿರುವುದರಿಂದ ಜನ ಹೆಚ್ಚಾಗಿ ವಾಯು ಶುದ್ಧೀಕರಣ ಉಪಕರಣಗಳನ್ನು ಕೇಳುತ್ತಿದ್ದಾರೆ’ ಎಂದು ದೆಹಲಿಯ ರಜೌರಿ ಗಾರ್ಡನ್ನ ವ್ಯಾಪಾರಿಯೊಬ್ಬರು ಹೇಳಿದರು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ಈಗಷ್ಟೇ ವಾಯು ಶುದ್ಧೀಕರಣ ಉಪಕರಣಗಳ ಬೇಡಿಕೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ಬೇಡಿಕೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಗಾಜಿಯಾಬಾದ್ನ ವ್ಯಾಪಾರಿಯೊಬ್ಬರು ತಿಳಿಸಿದರು.
.ವಾಯು ಗುಣಮಟ್ಟ ತೀವ್ರ ಕಳಪೆ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿ ನಿಷೇಧ: ದೆಹಲಿ ಸಚಿವ.
ದೀಪಾವಳಿಗೆ ಮುನ್ನ ಹರಿಯಾಣ ಹಾಗೂ ಪಂಜಾಬ್ನ ಉತ್ತರ ಭಾಗದಲ್ಲಿ ಬೆಳೆ ಸುಡುತ್ತಿರುವುದರಿಂದ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ. ಮಾಸ್ಕ್ಗಳಿಗೆ ಕೂಡ ಬೇಡಿಕೆ ಹೆಚ್ಚಳವಾಗಿದೆ. ಗ್ರಾಹಕರು ಎನ್95 ಮಾಸ್ಕ್ಗಳನ್ನು ಹೆಚ್ಚಾಗಿ ಕೇಳುತ್ತಿದ್ದಾರೆ ಎಂದು ದೆಹಲಿಯ ಫಾರ್ಮಾಸಿಸ್ಟ್ ಒಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.