ಡೆಹ್ರಾಡೂನ್ (ಉತ್ತರಾಖಂಡ): ರಿಷಿಕೇಶದ ಅಮಿತ್ ಗ್ರಾಮ ಎಂಬಲ್ಲಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಸುತ್ತಿಗೆ, ಜೆಸಿಬಿಗಳನ್ನು ಬಳಸಿ ದರ್ಗಾಗಳನ್ನು ಧ್ವಂಸಗೊಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ದೇವಭೂಮಿ ರಕ್ಷಣಾ ಅಭಿಯಾನದ ಇಬ್ಬರು ಕಾರ್ಯಕರ್ತರು ‘ಜೈ ಶ್ರೀ ರಾಮ್’ ಘೋಷಣೆ ಕೂಗುತ್ತ ಸುತ್ತಿಗೆಯಿಂದ ದರ್ಗಾಗಳನ್ನು ಒಡೆಯುತ್ತಿದ್ದರೆ, ಅವಶೇಷಗಳನ್ನು ಜೆಸಿಬಿ ತೆರವುಗೊಳಿಸುತ್ತಿರುವುದನ್ನೂ ವಿಡಿಯೊದಲ್ಲಿ ಕಾಣಬಹುದು.

‘ಇದು ದೇವಭೂಮಿ, ಮಜಾರ್ (ದರ್ಗಾ) ಭೂಮಿಯಲ್ಲ. ರಾಜ್ಯದಲ್ಲಿರುವ ಅಕ್ರಮ ದರ್ಗಾಗಗಳನ್ನು ಇದೇ ರೀತಿ ಧ್ವಂಸಗೊಳಿಸಲಾಗುವುದು’ ಎಂದು ಕಾರ್ಯಕರ್ತರು ಹೇಳುತ್ತಿರುವುದೂ ದೃಶ್ಯದಲ್ಲಿ ದಾಖಲಾಗಿದೆ.

ಉತ್ತರಾಖಂಡದ ಹಲವು ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಹಲವು ದರ್ಗಾಗಳನ್ನು ಈ ವರೆಗೆ ಧ್ವಂಸಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.