ನವದೆಹಲಿ: ‘ತಮ್ಮ ಬದುಕಿನದುದ್ದಕ್ಕೂ ದಿಗ್ಗಜರಾಗಿ ಮೆರೆದ ಖ್ಯಾತ ನಟ ದಿಲೀಪ್ ಕುಮಾರ್, ಭವಿಷ್ಯದಲ್ಲೂ ಸದಾ ಸ್ಮರಣೀಯರಾಗಿರುತ್ತಾರೆ. ಅವರ ನಿಧನದಿಂದ ಭಾರತೀಯ ಸಿನಿಮಾದ ಸುವರ್ಣ ಯುಗ ಅಂತ್ಯಗೊಂಡಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

‘ಕಲೆ ಮತ್ತು ಸಾಂಸ್ಕೃತಿಕ ಜಗತ್ತಿಗೆ ಅಪಾರ ಕೊಡುಗೆ ನೀಡಿರುವ ನಟ ದಿಲೀಪ್ ಕುಮಾರ್ ಅವರು, ಬೆಲೆ ಕಟ್ಟಲಾಗದ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ’ ಎಂದು ದಿಲೀಪ್ ಕುಮಾರ್ ಅವರ ಪತ್ನಿ ಸಾಯಿರಾ ಬಾನು ಅವರಿಗೆ ಕಳುಹಿಸಿರುವ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

‘ದಿಲೀಪ್ ಕುಮಾರ್ ಅವರ ನಟನಾ ಕೌಶಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಾತ್ರಗಳಿಗೆ ಭಾವನೆಗಳನ್ನು ತುಂಬುತ್ತಿದ್ದ ನಟರಾಗಿದ್ದರು. ಇಡೀ ದೇಶವು ಕುಮಾರ್ ಅವರನ್ನು ಸ್ಮರಿಸುತ್ತದೆ. ದಿಲೀಪ್ ಕುಮಾರ್ ಅವರ ಅಗಲಿಕೆ ಅಸಂಖ್ಯಾತ ಅಭಿಮಾನಿಗಳಿಗೆ ನೋವು ತಂದಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.