ಹೈದರಾಬಾದ್: ಭಾನುವಾರ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿದ ಮೋದಿ ತೆಲುಗು ದೇಶಂ ಪಾರ್ಟಿ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಭೇಟಿಗೆ ಮುನ್ನ ಗುಂಟೂರ್ ಮತ್ತು ವಿಜಯವಾಡಾದಲ್ಲಿ ಮೋದಿ ಗೋ ಬ್ಯಾಕ್ ಎಂಬ ಫಲಕ ಕಾಣಿಸಿಕೊಂಡಿತ್ತು. ಈ ಬಗ್ಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ, ಆಂಧ್ರದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಾವು ಶಾಲೆಯಲ್ಲಿ ಕಲಿಯುತ್ತಿದ್ದಾಗ ಟೀಚರ್ ಏನಾದರೊಂದು ವಿಷಯಕ್ಕೆ ಕರೆದು ಆಮೇಲೆ ಗೋ ಬ್ಯಾಕ್ ಅಂತಿದ್ದರು. ಅಂದರೆ ನಿಮ್ಮ ಜಾಗದಲ್ಲಿ ಹೋಗಿ ಕುಳಿತುಕೊಳ್ಳಿ. ಹೀಗೆ ಹೇಳುತ್ತಿದ್ದರಲ್ಲವೇ?

ನಾನು ತೆಲುಗು ದೇಶಂ ಪಕ್ಷಕ್ಕೆ ಋಣಿಯಾಗಿದ್ದೇನೆ.ಅವರು ನನ್ನಲ್ಲಿ ಹೇಳಿದ್ದಾರೆ ಗೋ ಬ್ಯಾಕ್. ಅಂದರೆ ದೆಹಲಿಗೆ ಹೋಗಿ ಮತ್ತೆ ಅಧಿಕಾರ ಮುಂದುವರಿಸಿ. ನನಗೆ ದೇಶದ ಕೋಟಿಗಟ್ಟಲೆ ಜನರ ಮೇಲೆ ನಂಬಿಕೆ ಇದೆ. ಅವರು ತೆಲುಗು ದೇಶಂ ಪಕ್ಷದ ಆಸೆಯನ್ನು ಈಡೇರಿಸಿ ನನ್ನನ್ನುಮತ್ತೊಮ್ಮೆ ಅಧಿಕಾರಕ್ಕೇರಿಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:
'ಮೋದಿಗೆ ಪ್ರವೇಶವಿಲ್ಲ', ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಬೃಹತ್ ಫಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.