ನವದೆಹಲಿ: ಅಮೆರಿಕದ ತನಿಖಾ ಸಂಸ್ಥೆಯಾಗಿರುವ, ಎಫ್‌ಬಿಐನ ನಿರ್ದೇಶಕ ಕ್ರಿಸ್ಟೋಫರ್ ರೇ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿಯೊಬ್ಬರ ಹತ್ಯೆಗೆ ಭಾರತ ಸರ್ಕಾರದ ಅಧಿಕಾರಿಯೊಬ್ಬರು ಸಂಚು ನಡೆಸಿದ್ದರು ಎಂದು ಅಮೆರಿಕದ ಆರೋಪದ ಬೆನ್ನಲ್ಲೆ ಈ ಭೇಟಿಯು ಮಹತ್ವ ಪಡೆದುಕೊಂಡಿದೆ.

ಆದರೆ, ಈ ಆರೋಪವನ್ನು ಭಾರತ ಅಲ್ಲಗಳೆದಿದೆ. ರೇ ಭೇಟಿ ಕುರಿತಂತೆ ಅಂತರಕಾಯ್ದುಕೊಂಡಿರುವ ಸರ್ಕಾರ, ಅವರ ಪ್ರವಾಸವು ಈ ಹಿಂದೆಯೇ ನಿರ್ಧಾರವಾಗಿತ್ತು ಎಂದು ತಿಳಿಸಿದೆ.

ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟಿ ಈ ಭೇಟಿ ಕುರಿತಂತೆ ಯಾವುದೇ ವಿವರ ನೀಡಿಲ್ಲ.

ಭಾರತದಲ್ಲಿ ಪ್ರತ್ಯೇಕ ಸಿಖ್ ರಾಜ್ಯ ಪ್ರತಿಪಾದಿಸಿದ್ದ ನ್ಯೂಯಾರ್ಕ್ ನಗರದ ನಿವಾಸಿಯೊಬ್ಬರ ಹತ್ಯೆಗೆ ಭಾರತೀಯ ಪ್ರಜೆಯೊಬ್ಬರ ಜೊತೆಗೂಡಿ ಸರ್ಕಾರದ ಅಧಿಕಾರಿಯೊಬ್ಬರು ಸಂಚು ನಡೆಸಿದ್ದರು ಎಂದು ಮ್ಯಾನ್‌ಹಾಟನ್‌ನಲ್ಲಿ ತನಿಖಾಧಿಕಾರಿ ಆರೋಪಿಸಿದ್ದರು.

ಆರೋಪ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದ ಭಾರತ ಸರ್ಕಾರ, ಇದು ಸರ್ಕಾರದ ನೀತಿಗೆ ವಿರುದ್ಧವಾದುದಾಗಿದೆ. ಆರೋಪ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದದೆ.

ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿರುವುದಾಗಿ ಹೇಳುವ, ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಎಫ್‌ಬಿಐ ನಿರ್ದೇಶಕರ ಭೇಟಿಯೂ ಈ ಹಿಂದೆಯೇ ನಿರ್ಧಾರವಾಗಿತ್ತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಭಾಗ್ಚಿ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.