ನವದೆಹಲಿ: ಬ್ರೆಜಿಲ್, ಭಾರತ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ ಬ್ರಿಕ್ಸ್‌ಗೆ (BRICS) ಹೊಸದಾಗಿ ಐದು ರಾಷ್ಟ್ರಗಳನ್ನು ಸೇರಿಸಲಾಗಿದೆ.

ಹೊಸದಾಗಿ ಸೇರ್ಪಡೆಗೊಂಡ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳಿಗೆ ಬ್ರಿಕ್ಸ್ ಪೂರ್ಣ ಸದಸ್ಯತ್ವವನ್ನು ನೀಡಿ ಘೋಷಿಸಲಾಗಿದೆ.

ಬ್ರಿಕ್ಸ್‌ನ ಅಧ್ಯಕ್ಷ ಸ್ಥಾನವನ್ನು ಮಾಸ್ಕೋ ವಹಿಸಿಕೊಂಡ ಬಳಿಕ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೋಮವಾರ, ‘ಈ ಗುಂಪು 10-ರಾಷ್ಟ್ರಗಳ ಸಂಸ್ಥೆಯಾಗಿ ಮಾರ್ಪಟ್ಟಿದ್ದು, ಹೊಸ ಸದಸ್ಯರಾಗಿ ಐದು ರಾಷ್ಟ್ರಗಳು ಸೇರ್ಪಡೆಗೊಂಡಿವೆ’ ಎಂದು ಘೋಷಿಸಿದ್ದಾರೆ.

ಆಗಸ್ಟ್‌ನಲ್ಲಿ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರು ಅರ್ಜೆಂಟೀನಾ ಸೇರಿದಂತೆ ಆರು ದೇಶಗಳನ್ನು ಜನವರಿ 1 ರಿಂದ ಜಾರಿಗೆ ಬರುವಂತೆ ಒಕ್ಕೂಟಕ್ಕೆ ಸೇರಿಸುವ ಪ್ರಸ್ತಾಪವನ್ನು ಅನುಮೋದಿಸಿದ್ದರು.

ಆದರೆ ಅರ್ಜೆಂಟೀನಾದ ಹೊಸ ಅಧ್ಯಕ್ಷ ಜೇವಿಯರ್ ಮಿಲೀ ಅವರು ಕಳೆದ ವಾರ ತಮ್ಮ ದೇಶವನ್ನು ಬ್ರಿಕ್ಸ್ ಸದಸ್ಯತ್ವದಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು. ಹೀಗಾಗಿ ಉಳಿದ ಐದು ದೇಶಗಳಿಗೆ ಸದಸ್ಯತ್ವ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.