ರಾಯಪುರ: ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಎಪಿಯ 53 ಅಭ್ಯರ್ಥಿಗಳಲ್ಲಿ ಐವರು 5 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದಾರೆ. ಒಂಬತ್ತು ಕ್ಷೇತ್ರಗಳಲ್ಲಿ ನೋಟಾಗಿಂತ ಹೆಚ್ಚು ಮತಗಳನ್ನು ಪಕ್ಷದ ಅಭ್ಯರ್ಥಿಗಳು ಪಡೆದಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಛತ್ತೀಸಗಢದಲ್ಲಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷಿಸಿದ್ದ ಎಎಪಿಗೆ ಶೇ 0.93 ಮತಗಳು ದೊರಕಿವೆ.

2018ರಲ್ಲಿ 90 ಕ್ಷೇತ್ರಗಳ ಪೈಕಿ 85ರಲ್ಲಿ ಎಎಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ ಎಲ್ಲರೂ ಠೇವಣಿ ಕಳೆದುಕೊಂಡಿದ್ದರು. ಪಕ್ಷವು ಶೇ 0.87 ಮತ ಪಡೆದಿತ್ತು. ಈ ಬಾರಿ ಎಷ್ಟು ಮಂದಿ ಠೇವಣಿ ಕಳೆದುಕೊಂಡಿದ್ದಾರೆ ಎಂದು ಇನ್ನಷ್ಟೇ ಆಯೋಗವು ಬಹಿರಂಗಪಡಿಸಬೇಕಿದೆ.

ಭಾನುಪ್ರತಾಪ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಛತ್ತೀಸಗಢ ಎಎಪಿ ರಾಜ್ಯ ಘಟಕದ ಅಧ್ಯಕ್ಷ ಕೋಮಲ್ ಹುಪೆಂಡಿ ಅವರು 15,255 ಮತ ಪಡೆದಿದ್ದಾರೆ. ಸಂತ್ರಾಮ್ ಸಲಾಮ್, ಬಲೂರಾಮ್ ಭವಾನಿ, ಖಾದ್ರಾಜ್ ಸಿಂಗ್ ಮತ್ತು ಜಸ್ವೀರ್ ಸಿಂಗ್ ಅವರು 5 ಸಾವಿರಕ್ಕೂ ಹೆಚ್ಚು ಮತ ಪಡೆದಿರುವ ಇತರ ಅಭ್ಯರ್ಥಿಗಳು.

‘ಕೆಲ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು. ಆದರೆ ಫಲಿತಾಂಶವು ನಮ್ಮ ನಿರೀಕ್ಷೆಗೆ ತಕ್ಕುದಾಗಿ ಬರಲಿಲ್ಲ. ಮುಂದಿನ ಬಾರಿ ಉತ್ತಮ ಪ್ರದರ್ಶನ ನೀಡುತ್ತೇವೆ’ ಎಂದು ಎಎಪಿ ರಾಜ್ಯ ವಕ್ತಾರ ಅಮ್ಯಾತಮ್ ಶುಕ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.