ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಕುರಿತು ನೀವು ಓದಲೇಬೇಕಾದ ಪ್ರಮುಖ10 ವರದಿಗಳು ಇಲ್ಲಿವೆ.

1.ಗೆಹ್ಲೋಟ್ ಗೆಲುವು ಸುಲಲಿತ

ಇಲ್ಲಿ ಎಲ್ಲರ ಕಣ್ಣೂ ಸರ್ದಾರ್ಪುರದ ಮೇಲಿದೆ. ಯಾಕೆಂದರೆ, ಇಲ್ಲಿನ ಜನ ಆಯ್ಕೆ ಮಾಡುವ ವ್ಯಕ್ತಿ ರಾಜಸ್ಥಾನದ ಮುಖ್ಯಮಂತ್ರಿಯಾಗುವ ಸಾಧ್ಯತೆ ಬಹಳ ಹೆಚ್ಚು. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ನಗರ ಕ್ಷೇತ್ರದಿಂದ ಐದನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

2.ರಾಜಸ್ಥಾನ: ಸದ್ದಿಲ್ಲದೆ ಬಂದಿದೆ ತೃತೀಯ ರಂಗ

ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತುಬಿಜೆಪಿ ಐದೈದು ವರ್ಷ ಪರ್ಯಾಯವಾಗಿ ಲೂಟಿ ಹೊಡೆಯುವ ಪದ್ಧತಿ ಇದೆ. ಈ ಬಾರಿ ಬಿಜೆಪಿ ಖಂಡಿತವಾಗಿಯೂ ಸೋಲಲಿದೆ. ಆದರೆ, ಗೆಲುವು ಸಾಧಿಸಲು ಕಾಂಗ್ರೆಸ್ಗೆ ಸಾಧ್ಯವಾಗದು ಎಂದುರೈತ ನಾಯಕ ಅಮ್ರಾ ರಾಮ್ ಅವರು ಭವಿಷ್ಯ ಹೇಳಿದ್ದಾರೆ.

3. ಮಧ್ಯ ಪ್ರದೇಶ: ಆಡಳಿತ ವಿರೋಧಿ ಅಲೆ ಹಿಮ್ಮೆಟ್ಟಿಸಲು ಬಿಜೆಪಿ ಯೋಜನೆ

ಮತದಾನದ ಮುನ್ನಾದಿನ ಬಿಡುವಿಲ್ಲದೆ ಕೆಲಸ ಮಾಡಿದ ಬಿಜೆಪಿ ಏಜೆಂಟರು.ಒಂದು ಮತಗಟ್ಟೆಗೆ ಹತ್ತು ಏಜೆಂಟರು ಇರಲೇಬೇಕು ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕೆಲಸದಲ್ಲಿ ಮಧ್ಯ ಪ್ರದೇಶ ಬಿಜೆಪಿಯ ಚುನಾವಣಾ ಕಾರ್ಯತಂತ್ರ ನಿಪುಣರು ನಿರತರಾಗಿದ್ದರು.

4.ನಿರುದ್ಯೋಗಿಗೆ ತಿಂಗಳಿಗೆ ₹5 ಸಾವಿರ: ಬಿಜೆಪಿ ಪ್ರಣಾಳಿಕೆ

21 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅರ್ಹ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹5 ಸಾವಿರ ನಿರುದ್ಯೋಗ ಭತ್ಯೆ ನೀಡುವುದಾಗಿ ರಾಜಸ್ಥಾನ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಪ್ರಣಾಳಿಕೆ ಹೇಳಿದೆ. ಹೀಗಿದ್ದೂ ಇಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

5.‘ಮಂದಿರವಲ್ಲ, ರೊಟ್ಟಿ, ಬಟ್ಟೆಯೇ ಚುನಾವಣಾ ವಿಚಾರ’

ಮಧ್ಯಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷಜ್ಯೋತಿರಾದಿತ್ಯ ಸಿಂಧಿಯಾ120ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಮಾತನಾಡಿದ್ದಾರೆ. ಒಂದೂರಿನಿಂದ ಮತ್ತೊಂದು ಊರಿಗೆ ಬಿಡುವಿಲ್ಲದೆಓಡುತ್ತಿರುವ ಗ್ವಾಲಿಯರ್ ರಾಜಕುಟುಂಬದ ಕುಡಿಸಿಂಧಿಯಾಶಿವಪುರಿಯ ವರ್ವಾರ್ನಲ್ಲಿ 'ಪ್ರಜಾವಾಣಿ'ಗೆ ಮಾತಿಗೆ ಸಿಕ್ಕರು. ಕಾಂಗ್ರೆಸ್ ಭವಿಷ್ಯದ ಬಗ್ಗೆ ಅವರು ಏನೆಲ್ಲ ಮಾತನಾಡಿದ್ದಾರೆ ಎಂಬುದನ್ನು ನೀವೇ ಓದಿ

6. ಗೆಲುವಿಗೆ ಬಿಜೆಪಿ ಏದುಸಿರು; ಚೇತರಿಸಿಕೊಂಡ ಕಾಂಗ್ರೆಸ್

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ: ಆಳುವ ಬಿಜೆಪಿ ಮತ್ತು ವಿರೋಧಪಕ್ಷ ಕಾಂಗ್ರೆಸ್ ನಡುವಣ ಸ್ಪರ್ಧೆ ತೀವ್ರ ತುರುಸು ಪಡೆಯುತ್ತ ನಡೆದಿದೆ. ಬಿಜೆಪಿ ಪುನಃ ಅಧಿಕಾರ ಹಿಡಿಯುತ್ತದೆಂದು ನಿಶ್ಚಿತವಾಗಿ ಹೇಳುವ ಸ್ಥಿತಿ ಇಲ್ಲ.

7.ರಾಜೇ ವಿರುದ್ಧ ಸಿಡಿದ ರಜಪೂತ ಸ್ವಾಭಿಮಾನ

ರಾಜಸ್ಥಾನ ಪ್ರಬಲ ಸಮುದಾಯವಾದ ರಜಪೂತರು ಪಶ್ಚಿಮ ಭಾಗದಲ್ಲಿ ರಾಜಕೀಯವಾಗಿ ದಟ್ಟ ಪ್ರಭಾವ ಹೊಂದಿದ್ದಾರೆ. ಇದೇ ಸೀಮೆಯಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಈ ಸಮುದಾಯವನ್ನು ಎದುರು ಹಾಕಿಕೊಂಡಿರುವ ಹಲವು ಪ್ರಕರಣಗಳಿವೆ.ಹೀಗಾಗಿಯೇ ರಾಜೇ ಸ್ಪರ್ಧಿಸಿರುವ ಝಾಲ್ರಾಪಾಟನ್ ಕ್ಷೇತ್ರ ರಜಪೂತ ಸಮುದಾಯದ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.

8. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್: ತೆಲಂಗಾಣ, ಮಿಜೋರಾಂನಲ್ಲಿ ಸ್ಥಳೀಯ ಪಕ್ಷ

ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುತ್ತಿದೆ. ಮಿಜೋರಾಂ ಮತ್ತು ತೆಲಂಗಾಣದಲ್ಲಿ ಮತದಾರರು ರಾಷ್ಟ್ರೀಯ ಪಕ್ಷಗಳೊಂದಿಗೆ ಅಂತರ ಕಾಯ್ದುಕೊಂಡು ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಿರುವುದು ಸ್ಪಷ್ಟವಾಗಿದೆ.

9.ಈಶಾನ್ಯದ ಕಟ್ಟಕಡೆಯ ಕಿಲ್ಲೆ 'ಗೆದ್ದೀತೇ' ಬಿಜೆಪಿ?

ಗುಡ್ಡಗಾಡು ಜನರ ನಾಡು ಎನಿಸಿರುವ ಮಿಜೋರಾಂನಲ್ಲಿಕಾಂಗ್ರೆಸ್ ಪಕ್ಷ 2008ರಲ್ಲಿ 32 ಮತ್ತು 2013ರಲ್ಲಿ 34ಸೀಟು ಗೆದ್ದಿತ್ತು. ಇಲ್ಲಿ ಸರ್ಕಾರ ರಚಿಸಲು21ಸೀಟುಗಳ ಬಹುಮತ ಸಾಕು.ಈ ಸಲದ ಚುನಾವಣೆಯಲ್ಲಿ ಮುಖ್ಯವಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

10. ಮುಂಬರುವ ಲೋಕಸಭೆಚುನಾವಣೆಗೆ ಇದು ದಿಕ್ಸೂಚಿ ಅಲ್ಲ ಎನ್ನುತ್ತಾರೆ ರಾಜಕೀಯ ಪಂಡಿತರು

2019ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿತವಾದ ಚುನಾವಣಾ ನಾಟಕದ ಅಂತಿಮ ದೃಶ್ಯವನ್ನು ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಭವಿಷ್ಯದ ದಿಕ್ಕು ಎಂದು ಪರಿಗಣಿಸಿರುವ ಈ ಚುನಾವಣೆಯ ಫಲಿತಾಂಶ ನಿಜಕ್ಕೂ 2019ರ ಚುನಾವಣೆಗೆ ದಿಕ್ಸೂಚಿಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.