ಪಾಡೇರು (ಆಂಧ್ರಪ್ರದೇಶ): ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ಸೇರಿದ ನಾಲ್ವರು ಸದಸ್ಯರು ಗುರುವಾರ ಪೊಲೀಸರ ಮುಂದೆ ಶರಣಾದರು.

ಈ ಕುರಿತು ಮಾಹಿತಿ ನೀಡಿದ ಅಲ್ಲೂರಿ ಸೀತಾರಾಮ ರಾಜು (ಎಎಸ್ಆರ್) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತುಹಿನ್ ಸಿನ್ಹಾ, ‘ಗಾಳಿಕೊಂಡ ದಳಕ್ಕೆ ಸೇರಿದ ಟಿ.ಸಾಯಿರಾಂ, ವಿ.ಕಿರಣ್, ಟಿ.ರಮೇಶ್, ಕೆ.ಬಾಬುರಾವ್ ಸ್ವಯಂ ಪ್ರೇರಿತರಾಗಿ ಶರಣಾಗಿದ್ದಾರೆ’ ಎಂದು ಅವರು ತಿಳಿಸಿದರು.

‘ಸಮುದಾಯ ಪೊಲೀಸ್ ವ್ಯವಸ್ಥೆಯ ವ್ಯಾಪಕ ಪ್ರಚಾರ ಹಾಗೂ ಸಂಘಟನೆಯಲ್ಲಿ ಸೂಕ್ತ ನಾಯಕತ್ವದ ಕೊರತೆಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಗಾಳಿಕೊಂಡ ಪ್ರದೇಶದಲ್ಲಿ ಈಗಾಗಲೇ ಸಂಘಟನೆಯ ಹಲವು ಮುಖಂಡರು ಶರಣಾಗಿದ್ದು, ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.