ನವದೆಹಲಿ: ವಿವಿಧ ಸುದ್ದಿ ವಾಹಿನಿಗಳ 14 ನಿರೂಪಕರ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಲು ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಗುರುವಾರ ನಿರ್ಧರಿಸಿದೆ. ಒಕ್ಕೂಟದ ಸಮನ್ವಯ ಸಮಿತಿಯ ಮೊದಲ ಸಭೆ ನಡೆದ ಒಂದು ದಿನದ ಬಳಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಇಂಡಿಯಾ ಒಕ್ಕೂಟದ ಸಮನ್ವಯ ಸಮಿತಿಯ ಮೊದಲ ಸಭೆ ಸೆಪ್ಟೆಂಬರ್ 13ರಂದು ನಡೆದಿದೆ. ಈ ಸಭೆಯಲ್ಲಿ ನಿರೂಪಕರ ಪಟ್ಟಿ ತಯಾರಿಸಲು ಸೂಚಿಸಲಾಗಿತ್ತು. ಅದರಂತೆ ಇಂದು ಮಧ್ಯಾಹ್ನ ವರ್ಚುವಲ್ ಆಗಿ ನಡೆದ ಒಕ್ಕೂಟದ ಮಾಧ್ಯಮ ಸಮಿತಿ ಸಭೆಯಲ್ಲಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಕಾಂಗ್ರೆಸ್ ವಕ್ತಾರ ಪವನ್ ಖೆರಾ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ನಿರೂಪಕರ ಪಟ್ಟಿ ಹಂಚಿಕೊಂಡಿದ್ದಾರೆ.

ವಿವಿಧ ಸುದ್ದಿ ವಾಹಿನಿಗಳ ನಿರೂಪಕರಾದ ಅದಿತಿ ತ್ಯಾಗಿ, ಅಮನ್ ಚೋಪ್ರಾ, ಅಮಿಷ್ ದೇವಗನ್, ಆನಂದ್ ನರಸಿಂಹನ್, ಅರ್ನಬ್ ಗೋಸ್ವಾಮಿ, ಅಶೋಕ್ ಶ್ರೀವಸ್ತವ್, ಚಿತ್ರಾ ತ್ರಿಪಾಠಿ, ಗೌರವ್ ಸಾವಂತ್, ನವಿಕಾ ಕುಮಾರ್, ಪ್ರಾಚಿ ಪರಶಾರ್, ರುಬಿಕಾ ಲಿಯಾಖತ್, ಶಿವ್ ಅರೂರ್, ಸುಧೀರ್ ಚೌಧರಿ ಮತ್ತು ಸುಶಾಂತ್ ಸಿನ್ಹಾ ಅವರ ಕಾರ್ಯಕ್ರಮಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸದಿರಲು ಮೈತ್ರಿಕೂಟದ ಪಕ್ಷಗಳು ಸಮ್ಮತಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.