ಮುಂಬೈ: ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ವಾಹನವು ಮುಂಬೈನ ಚಾಂದೀವಲಿ ಪ್ರದೇಶದಲ್ಲಿ ಸಾಗುತ್ತಿದ್ದಾಗ, ಸಂತೋಷ್ ಕಾಟ್ಕೆ ಎನ್ನುವ ಯುವಕನೊಬ್ಬ ಅವರ ವಾಹನಕ್ಕೆ ಅಡ್ಡ ಬಂದು, ಶಿಂದೆ ಅವರನ್ನು ಉದ್ದೇಶಿಸಿ ‘ದ್ರೋಹಿ’ (ಗದ್ದಾರ್) ಎಂದು ಕರೆದ. ಎರಡೂವರೆ ವರ್ಷಗಳ ಹಿಂದೆ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದು, ಮುಖ್ಯಮಂತ್ರಿ ಆಗಿದ್ದ ಶಿಂದೆ ಅವರು ಈ ಪ್ರಸಂಗದ ಕಾರಣದಿಂದಾಗಿ ಮುಜುಗರಕ್ಕೆ ಒಳಗಾಗಿದ್ದರು.

ಇಂತಹ ಪರಿಸ್ಥಿತಿಗಳನ್ನು ನಿಭಾಯಿಸು ವುದರಲ್ಲಿ ಚಾತುರ್ಯ ಹೊಂದಿರುವ ಶಿಂದೆ, ತಮ್ಮ ವಿರುದ್ಧ ಘೋಷಣೆ ಕೂಗುತ್ತಿ ದ್ದವರ ಜೊತೆ ಮುಖಾಮುಖಿಯಾಗಲು ಮುಂದಾಗಿದ್ದರು. ಆಗ ಆ ಪ್ರತಿಭಟನ ಕಾರರು ಕಾಂಗ್ರೆಸ್ ಕಚೇರಿಯೊಳಕ್ಕೆ ಹೋಗಿ ಕುಳಿತಿದ್ದರು.

ಅವರನ್ನು ಹಿಂಬಾಲಿಸಿದ ಶಿಂದೆ, ಅವರ ವರ್ತನೆಯನ್ನು ಪ್ರಶ್ನಿಸಿದ್ದರು. ಅವರನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು. ಪ್ರತಿಭಟನಕಾರರನ್ನು ನಂತರ ಬಿಡುಗಡೆ ಮಾಡಲಾಯಿತು. ಇದಾದ ನಂತರ ಉದ್ಧವ್ ಠಾಕ್ರೆ ಅವರು ಸಂತೋಷ್ ಮತ್ತು ಅವರ ತಂದೆ ಸಾಧು ಕಾಟ್ಕೆ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು.

2022ರ ಜೂನ್–ಜುಲೈನಲ್ಲಿ ಶಿಂದೆ ಅವರು ಶಿವಸೇನಾ ಪಕ್ಷವನ್ನು ಒಡೆದು, ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಿ, ಶಿವಸೇನಾ ಪಕ್ಷವನ್ನು ಹಾಗೂ ಅದರ ಬಿಲ್ಲು–ಬಾಣದ ಚಿಹ್ನೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದು ಕೊಂಡ ನಂತರದಲ್ಲಿ ‘ದ್ರೋಹಿ’ ಎಂಬ ಪದವು ಮಹಾರಾಷ್ಟ್ರ ರಾಜಕಾರಣದಲ್ಲಿ ಬಹಳ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಅಜಿತ್ ಪವಾರ್ ಅವರು ಶರದ್ ಪವಾರ್ ವಿರುದ್ಧ ಬಂಡಾಯವೆದ್ದ ನಂತರದಲ್ಲಿ ‘ದ್ರೋಹಿ’ ಪದದ ಬಳಕೆಯು ಹೆಚ್ಚಾಗಿದೆ. ಶಿವಸೇನಾ ಹಾಗೂ ಎನ್ಸಿಪಿಯ ವಿಭಜನೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಪ್ರಮುಖ ವಿಷಯಗಳಾಗಿದ್ದವು. ಈಗ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿಯೂ ಅವು ಪ್ರಮುಖವಾಗಿ ಪ್ರಸ್ತಾಪ ಆಗುತ್ತಿವೆ.

ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವುತ್ ಮಾತ್ರವೇ ಅಲ್ಲದೆ, ಶರದ್ ಪವಾರ್ ಅವರೂ ಈ ಪದವನ್ನು ಚುನಾವಣಾ ರ್ಯಾಲಿಗಳಲ್ಲಿ ಬಳಸುತ್ತಿದ್ದಾರೆ. 2023ರ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಂಧುದುರ್ಗ ದಲ್ಲಿ ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯು ಈಚೆಗೆ ಕುಸಿದುಬಿತ್ತು. ಆಗಲೂ ಈ ಪದದ ಬಳಕೆ ಆಯಿತು. ಪ್ರತಿಮೆ ಬಿದ್ದ ವಿಚಾರವಾಗಿ ಮೋದಿ ಅವರು ಕ್ಷಮೆ ಯಾಚಿಸಿದರಾದರೂ, ಮಹಾ ವಿಕಾಸ ಆಘಾಡಿ ಮೈತ್ರಿಕೂಟವು ಮೋದಿ ವಿರುದ್ಧ ವಾಗ್ದಾಳಿ ನಡೆಸಿತು.

‘ಕ್ಷಮೆ ಕೇಳುವಾಗಲೂ ಅವರ (ಮೋದಿ) ಮುಖದಲ್ಲಿ ಅಹಂಕಾರ ಇತ್ತು. ಇದನ್ನು ಒಪ್ಪಲಾಗದು. ಕ್ಷಮೆ ಯಾಚಿಸಿದ್ದು ಪ್ರತಿಮೆ ಬಿತ್ತು ಎಂಬ ಕಾರಣಕ್ಕೋ, ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೋ ಅಥವಾ ಭ್ರಷ್ಟಾಚಾರವನ್ನು ಮುಚ್ಚಿಹಾಕು ವುದಕ್ಕೋ? ಶಿವಾಜಿ ಮಹಾರಾಜರಿಗೆ ಅವಮಾನ ಎಸಗಿದವರನ್ನು ಜನ ಕ್ಷಮಿಸು ವುದಿಲ್ಲ. ಶಿವಾಜಿ ಮಹಾರಾಜರಿಗೆ ದ್ರೋಹ ಮಾಡಿದವರನ್ನು ಭಾರತದಿಂದ ಹೊರಹಾಕುವವರೆಗೆ ನಾವು ವಿರಮಿಸುವುದಿಲ್ಲ’ ಎಂದು ಠಾಕ್ರೆ ಆಗ ಹೇಳಿದ್ದರು.

ಠಾಕ್ರೆ ಅವರು ಚುನಾವಣಾ ರ್ಯಾಲಿಗಳಲ್ಲಿ ‘ದ್ರೋಹಿ’ ಪದವನ್ನು ಹಲವು ಬಾರಿ ಬಳಸುತ್ತಾರೆ. ‘ಈ ದ್ರೋಹಿಗಳಿಗೆ ಪಾಠ ಕಲಿಸಿ’ ಎಂದು ಅವರು ಹಲವು ಬಾರಿ ಹೇಳುತ್ತಾರೆ. ಇದು ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಒಂದಿಷ್ಟು ನೆರವಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.