ನವದೆಹಲಿ: ಜಿ-20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಂಡಿದೆ ಎಂದರೆ ದೇಶದ ಜನತೆಯೇ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ ಎಂದರ್ಥ ಎಂದು ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಹೇಳಿದ್ದಾರೆ.

ಜಿ–20 ಶೃಂಗಸಭೆಯು ಸೆಪ್ಟೆಂಬರ್ 9 ಹಾಗೂ 10ರಂದು ದೆಹಲಿಯಲ್ಲಿ ನಡೆಯಲಿದೆ. ಈ ಸಭೆಗಾಗಿ ಭಾರತ ಸನ್ನದ್ಧವಾಗಿದ್ದು 40 ದೇಶಗಳ ನಾಯಕರು ಹಾಗೂ ಜಾಗತಿಕ ಸಂಘಟನೆಗಳ ಮುಖ್ಯಸ್ಥರು ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದರು.

ಜಿ–20 ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಈ ಗುಂಪನ್ನು ಹೆಚ್ಚು ಒಳಗೊಳ್ಳುವಿಕೆ ಇರುವ ವೇದಿಕೆಯನ್ನಾಗಿ ಮಾಡಿದ ಹೆಗ್ಗಳಿಕೆಯೂ ಭಾರತದ್ದಾಗಿದೆ. ಇದು ಈ ಸಂಘಟನೆಯ ಇತಿಹಾಸದಲ್ಲಿಯೇ ದೊಡ್ಡ ಸಭೆಯಾಗಲಿದೆ ಎಂದು ಅವರು ಹೇಳಿದರು.

ಭಾರತದ ಆಹ್ವಾನದ ಮೇರೆಗೆ ಆಫ್ರಿಕಾ ಒಕ್ಕೂಟ ಸಹ ಜಿ–20 ಸೇರುತ್ತಿದೆ. ಆಫ್ರಿಕಾ ಜನರ ಕೂಗು ವಿಶ್ವದ ಈ ಮಹತ್ವದ ವೇದಿಕೆಯನ್ನು ತಲುಪಿದಂತಾಗಿದೆ ಎಂದು ಮೋದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.