ನವದೆಹಲಿ: ನ್ಯಾಷನಲ್ ಮೆಮೋರಿಯಂ ಆ್ಯಂಡ್ ಮ್ಯೂಸಿಯಂ, ಮಹಾತ್ಮ ಗಾಂಧಿ ಸ್ಮರಣಾರ್ಥ ಹೊರತರುತ್ತಿರುವ 'ಅಂತಿಮ್ ಜನ್' ಮಾಸಪತ್ರಿಕೆಯಲ್ಲಿ ಹಿಂದುತ್ವ ಮುಖಂಡ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಮೀಸಲಿಟ್ಟು ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುತ್ತಿದೆ.

ಸಾವರ್ಕರ್ ಅವರನ್ನು 'ಮಹಾನ್ ದೇಶಭಕ್ತ' ಎಂದು ಶ್ಲಾಘಿಸಿದ್ದು, 'ಇತಿಹಾಸದಲ್ಲಿ ಸಾವರ್ಕರ್ ಅವರ ಸ್ಥಾನ ಗಾಂಧಿ ಅವರಿಗಿಂತ ಕಡಿಮೆಯಿಲ್ಲ' ಎಂದು ಉಲ್ಲೇಖಿಸಲಾಗಿದೆ.

ಜೂನ್ ತಿಂಗಳ ಪ್ರತಿಯನ್ನುಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿ (ಜಿಎಸ್‌ಡಿಎಸ್)ಹಿಂದಿ ಭಾಷೆಯಲ್ಲಿ ಹೊರತರುತ್ತಿದೆ. ಈ ಪ್ರತಿಷ್ಠಿತ ಸಂಸ್ಥೆಯು ಸಂಸ್ಕೃತಿ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ಅಧ್ಯಕ್ಷರಾಗಿದ್ದಾರೆ.

ಸಾವರ್ಕರ್ ಅವರ ಸಚಿತ್ರವಿರುವ ಮುಖಪುಟವಿದ್ದು, ಧಾರ್ಮಿಕ ಸಹಿಷ್ಣುತೆಗೆ ಸಂಬಂಧಿಸಿ ಮಹಾತ್ಮ ಗಾಂಧಿ, ಹಿಂದುತ್ವಕ್ಕೆ ಸಂಬಂಧಿಸಿ ಸಾವರ್ಕರ್ ಹಾಗೂ ಸಾವರ್ಕರ್ ಅವರ ಕುರಿತಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹಳೆಯ ಲೇಖನಗಳಿಗೆ ಪ್ರತಿರೂಪ ನೀಡಲಾಗಿದೆ.

ಈ ಸಂಸ್ಥೆಯು ತೀಸ್ ಜನವರಿ ಮಾರ್ಗ್ (ಅಲ್ಬುಕರ್ಕ್ ರಸ್ತೆ)ನಲ್ಲಿರುವ ಬಿರ್ಲಾ ಹೌಸ್‌ನಲ್ಲಿದೆ. ಇದು 1948ರ ಜನವರಿ 30ರಂದು ಮಹಾತ್ಮ ಗಾಂಧಿ ಅವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ ಸ್ಥಳವಾಗಿದೆ.

ಉಪರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ ಕಣಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.