ಕೊಚ್ಚಿ: ರಾಜತಾಂತ್ರಿಕ ವಿಭಾಗದ ಮೂಲಕ ಅಕ್ರಮ ಚಿನ್ನ ಸಾಗಣೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳದ ಸ್ವಪ್ನಾ ಸುರೇಶ್ ಅವರ ಅರ್ಜಿ ವಿಚಾರಣೆಯನ್ನು ಜುಲೈ 29ರಂದು ನಡೆಸುವುದಾಗಿ ಕೇರಳ ಹೈಕೋರ್ಟ್ ಶುಕ್ರವಾರ ತಿಳಿಸಿದೆ.

ತನಗೆ ಜಾಮೀನು ನಿರಾಕರಿಸುವ ಎನ್ಐಎ ನ್ಯಾಯಾಲಯದ ಆದೇಶದ ವಿರುದ್ಧ ಸ್ವಪ್ನಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಕೆಯ ಮನವಿಯನ್ನು ವಿರೋಧಿಸಿ, ಎನ್ಐಎ ಆಕ್ಷೇಪಣೆ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಝಿಯಾದ್ ರಹಮಾನ್ ಎ.ಎ. ಅವರನ್ನೊಳಗೊಂಡ ಪೀಠ ಇತರ ಆರೋಪಿಗಳ ಜಾಮೀನು ಅರ್ಜಿಗಳ ಜತೆಯಲ್ಲಿ ಈ ಅರ್ಜಿಯನ್ನೂ ಜುಲೈ 29ರಂದು ವಿಚಾರಣೆಗೆ ಕೃಗೆತ್ತಿಕೊಳ್ಳುವುದಾಗಿ ತಿಳಿಸಿತು ಹಾಗೂ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ನ ನಿರ್ಧಾರಗಳಿಗೆ ಕಾಯುವುದಾಗಿ ತಿಳಿಸಿತು.

ತನ್ನ ವಿರುದ್ಧಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರಲ್ಲಿ ಅರ್ಥವಿಲ್ಲ, ವಿಚಾರಣೆಯನ್ನು ಸುಮ್ಮನೆ ವಿಳಂಬ ಮಾಡುತ್ತಿದ್ದಾರೆ ಎಂದು ಸ್ವಪ್ನಾ ಸುರೇಶ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಜುಲೈ 5ರಂದು ತಿರುವನಂತಪುರ ವಿಮಾನನಿಲ್ದಾಣದಲ್ಲಿ ಯುಎಇ ರಾಜತಾಂತ್ರಿಕ ಕಚೇರಿಯ ವಿಳಾಸವಿದ್ದ ಬ್ಯಾಗ್ನಲ್ಲಿ 15 ಕೆ.ಜಿ. ಅಕ್ರಮ ಚಿನ್ನ ಪತ್ತೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.