ನವದೆಹಲಿ: ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಬಿತ್ತರ ಮಾಡದಂತೆ ಎಫ್ಎಂ ರೇಡಿಯೊ ವಾಹಿನಿಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ದೇಶನ ನೀಡಿದೆ.

ಇಂಥ ವಿಷಯಗಳನ್ನು ಬಿತ್ತರಿಸುವುದು ಪರವಾನಗಿ ಒಪ್ಪಂದದ (ಜಿಒಪಿಎ) ಉಲ್ಲಂಘನೆಯಾಗುವುದು. ಒಪ್ಪಂದ ಉಲ್ಲಂಘಿಸುವ ವಾಹಿನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಚಿವಾಲಯ ಎಚ್ಚರಿಸಿದೆ.

‘ಕೆಲ ಎಫ್ಎಂ ರೇಡಿಯೊ ವಾಹಿನಿಗಳು ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಆಗಾಗ್ಗೆ ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ರೇಡಿಯೊ ಜಾಕಿಗಳ ಪೈಕಿ ಕೆಲವರು ಬಳಸುವ ಭಾಷೆ ಆಕ್ರಮಣಕಾರಿ, ಅಸಭ್ಯ ಅಥವಾ ದ್ವಂದ್ವಾರ್ಥದಿಂದ ಕೂಡಿರುತ್ತದೆ. ಅವಹೇಳನಕಾರಿ ಹಾಗೂ ಕೀಳು ಅಭಿರುಚಿಯ ಮಾತುಗಳನ್ನೂ ಬಳಸುತ್ತಿರುವುದು ಕಂಡುಬಂದಿದೆ’ ಎಂದು ಸಚಿವಾಲಯ ಇತ್ತೀಚೆಗೆ ಹೇಳಿತ್ತು.

ನಿರ್ಬಂಧಗಳು ರಷ್ಯಾದ ಆರ್ಥಿಕತೆ ಕುಸಿತಕ್ಕೆ ಕಾರಣವಾಗುತ್ತವೆ: ಫ್ರಾನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.