ನವದೆಹಲಿ: ದೇಶದಲ್ಲಿ ಪಾರ್ಸಿಗಳ ಜನಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಗಣನೀಯ ಪ್ರಮಾಣದಲ್ಲಿ ಪಾರ್ಸಿಗಳ ಜನಸಂಖ್ಯೆಕುಸಿದಿರುವುದಕ್ಕೆ ಆ ಸಮುದಾಯದ ಯುವಕ ಯುವತಿಯರು ಮದುವೆ ಬಗ್ಗೆ ತಾಳುತ್ತಿರುವ ನಿರ್ಲಕ್ಷ್ಯವೇ ಕಾರಣ ಎಂದು ಸಚಿವಾಲಯ ಜಿಯೋ ಪಾರ್ಸಿ ಯೋಜನೆಯಡಿ ಹೊಸ ಪ್ರಯತ್ನ ಮಾಡುತ್ತಿದೆ.

ಈ ಜಿಯೋ ಪಾರ್ಸಿ ಯೋಜನೆ ಭಾಗವಾಗಿ ಪಾರ್ಸಿ ಸಮುದಾಯದ ಯುವಕ–ಯುವತಿಯರ ಬೇಗ ಮದುವೆಯಾಗಲು ಹಾಗೂ ಮಕ್ಕಳನ್ನು ಹೊಂದಲು ಅನುಕೂಲ ಆಗುವಂತೆ ಆನ್ಲೈನ್ ಡೇಟಿಂಗ್ ಸೌಲಭ್ಯವನ್ನು ಒದಗಿಸಿ ಕೊಡಲಾಗುತ್ತದೆ.

ಸದ್ಯ ಭಾರತದಲ್ಲಿ ಶೇ 30 ರಷ್ಟು ಪಾರ್ಸಿ ಯುವಕ ಯುವತಿಯರು ಅವಿವಾಹಿತರಾಗಿ ಉಳಿದಿದ್ದಾರೆ. ಇದರಿಂದ ಪಾರ್ಸಿಗಳ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ ಎನ್ನಲಾಗಿದೆ.

‘ಸೂಕ್ತ ಸಮಯದಲ್ಲಿ ಪಾರ್ಸಿ ಯುವಕ ಯುವತಿಯರಿಗೆ ಮದುವೆಯಾಗುವಂತೆ ಮಾಡಬೇಕಾಗಿದೆ. ಏಕೆಂದರೆ ಈ ಸಮುದಾಯದಲ್ಲಿ ಮದುವೆಯಾದವರು ಗರ್ಭ ಧರಿಸುವ ಪ್ರಮಾಣ ಶೇ 0.8 ರಷ್ಟಿದೆ ಎಂದು ಹೇಳುತ್ತಾರೆ. ಇದರಿಂದ ಜನಸಂಖ್ಯೆ ಕುಸಿದಿದೆ ಎನ್ನುತ್ತಾರೆಜಿಯೋ ಪಾರ್ಸಿ ಯೋಜನೆ ತಯಾರಿಕೆಯಲ್ಲಿ ಮುಖ್ಯ ಪಾತ್ರವಹಿಸಿರುವ ಪಾರ್ಜೋರ್ ಪೌಂಢೇಶನ್ ಮುಖ್ಯಸ್ಥ ಶರ್ನಾಜ್ ಕಾಮಾ.

ಪಾರ್ಸಿ ಸಮುದಾಯದಲ್ಲಿ ವರ್ಷಕ್ಕೆ 200 ರಿಂದ 300 ಶಿಶುಗಳ ಜನನವಾದರೇ ಇದೇ ಸಮಯದಲ್ಲಿ 700 ರಿಂದ 800 ಜನ ಪಾರ್ಸಿಗಳು ಸಾಯುತ್ತಿದ್ದಾರೆ ಎಂದು ಕಾಮಾ ತಿಳಿಸುತ್ತಾರೆ.

ಸದ್ಯ ದೇಶದಲ್ಲಿ 2011 ರ ಜನಗಣತಿ ಪ್ರಕಾರ 57,264 ಪಾರ್ಸಿಗಳು ಇದ್ದಾರೆ. ಆದರೆ 1941 ರಲ್ಲಿ ಇವರ ಸಂಖ್ಯೆ1,14,000 ಇತ್ತು.

ಜಿಯೋ ಪಾರ್ಸಿ ಯೋಜನೆಯನ್ನು ಪಾರ್ಸಿಗಳ ಕಲ್ಯಾಣಕ್ಕಾಗಿ ಅಂದಿನ ಯುಪಿಎ ಸರ್ಕಾರ ಜಾರಿಗೊಳಿಸಿತ್ತು. ಈ ಯೋಜನೆಗೆ ಕೇಂದ್ರ ಬಜೆಟ್ನಲ್ಲಿ 4 ರಿಂದ 5 ಕೋಟಿ ರೂಪಾಯಿ ವ್ಯಯಿಸುತ್ತಿದೆ.

ಪಾರ್ಸಿಸಮುದಾಯದಲ್ಲಿ ಜನಸಂಖ್ಯೆ ಹೆಚ್ಚಳ ಆಗದಿರುವುದಕ್ಕೆ ದೊಡ್ಡ ಕಾರಣವೇ ಆ ಸಮುದಾಯದಲ್ಲಿ ಅಲ್ಲಿನ ವಯಸ್ಕರರು ಮದುವೆಯಾಗಲು ಮುಂದೆ ಬರುತ್ತಿಲ್ಲ ಎಂದು ಕಾಮಾ ಹೇಳುತ್ತಾರೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಜಿಯೋ ಪಾರ್ಸಿ ಯೋಜನೆಯ ಭಾಗವಾಗಿ ವಯಸ್ಕ ಪಾರ್ಸಿ ಯುವಕ ಯುವತಿಯರಿಗೆ ಆನ್ಲೈನ್ ಡೇಟಿಂಗ್ ನಡೆಸಲು ಅವಕಾಶ ಮಾಡಿಕೊಡುತ್ತೇವೆ. ಇದಕ್ಕಾಗಿ ನುರಿತ ಆಪ್ತ ಸಮಾಲೋಚಕರನ್ನುನಿಡುತ್ತಿದ್ದೇವೆ. ಒಳ್ಳೆಯ ಉದ್ದೇಶಕ್ಕಾಗಿ ಈ ಯೋಜನೆ ಆರಂಭಿಸಲು ನಾವು ಇಲಾಖೆಗೆ ಸಹಾಯ ಮಾಡಿದ್ದೇವೆ. ಇದರ ಸದುಪಯೋಗವನ್ನು ಪಾರ್ಸಿಗಳು ಪಡೆದುಕೊಳ್ಳಬೇಕುಎಂದು ಕಾಮಾ ತಿಳಿಸುತ್ತಾರೆ.

ಪಾರ್ಸಿಗಳು ಹೆಚ್ಚಾಗಿ ಅಂತರ್ ಧರ್ಮಿಯ ಮದುವೆಗಳಲ್ಲಿ ಬೆರೆತು ಹೋಗುತ್ತಿದ್ದಾರೆ. ಇದರಿಂದ ಪಾರ್ಸಿ ಹೆಣ್ಣು ಮಗಳು ಬೇರೆ ಧರ್ಮದವನ ಮದುವೆಯಾದರೆ ಅವರಿಗೆ ಹುಟ್ಟುವ ಮಗು ಪಾರ್ಸಿಯಾಗಿರುವುದಿಲ್ಲ ಎಂದು ಕಾಮಾ ಹೇಳುತ್ತಾರೆ.

ಕತ್ರಿನಾ ಕೈಫ್ ಅಣ್ಣನ ಜೊತೆ ಲವ್ನಲ್ಲಿ ಬಿದ್ರಾ ಬಳಕುವ ಬಳ್ಳಿ ಇಲಿಯಾನ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.