ನವದೆಹಲಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರ ನೋಂದಣಿಗಾಗಿ ಆರಂಭಿಸಲಾಗಿದ್ದ ‘ಕೋವಿನ್’ ವೇದಿಕೆಯನ್ನು ಇತರ ಆರೋಗ್ಯ ಸೇವೆಗಳಿಗಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

‘ದೇಶದಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ (ಯುಐಪಿ) ಸೇರಿದಂತೆ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ ಈ ಆನ್ಲೈನ್ ವೇದಿಕೆಯನ್ನು ಬಳಸಿಕೊಳ್ಳಲಾಗುವುದು. ಜೊತೆಗೆ, ಕೋವಿಡ್ ಲಸಿಕೆ ನೀಡಿರುವುದರ ವಿವರಗಳನ್ನು ದಾಖಲಿಸಲು ಹಾಗೂ ಪ್ರಮಾಣಪತ್ರಗಳನ್ನು ನೀಡಲು ಸಹ ಈ ವೇದಿಕೆ ಬಳಕೆಯನ್ನು ಮುಂದುವರಿಸಲಾಗುತ್ತದೆ’ ಎಂದು ಕೋವಿನ್ ಪೋರ್ಟಲ್ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ.ಆರ್.ಎಸ್.ಶರ್ಮಾ ತಿಳಿಸಿದ್ದಾರೆ.

ಸದ್ಯ, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ ವಿವರಗಳನ್ನು ದಾಖಲಿಸುವ ಕಾರ್ಯವನ್ನು ಕೈಬರಹದ ಮೂಲಕವೇ ನಿರ್ವಹಿಸಲಾಗುತ್ತಿದೆ.

‘ಯುಐಪಿಯ ಫಲಾನುಭವಿಗಳನ್ನು ಪತ್ತೆ ಹಚ್ಚುವುದು ಹಾಗೂ ಅವರ ಆರೋಗ್ಯದ ಮೇಲೆ ನಿಗಾ ಇಡಲು ಕೋವಿನ್ ನೆರವಾಗಲಿದೆ. ಭೌತಿಕವಾಗಿ ದಾಖಲೆಗಳನ್ನು ಸಂರಕ್ಷಿಸುವುದನ್ನು ಸಹ ತಪ್ಪಿಸಲಿದೆ. ಯುಐಪಿಯಡಿ ಲಸಿಕೆ ಹಾಕಿಸಿಕೊಂಡವರಿಗೆ ತಕ್ಷಣವೇ ಪ್ರಮಾಣಪತ್ರ ಸಿಗುತ್ತದೆ. ಈ ಪ್ರಮಾಣಪತ್ರಗಳನ್ನು ಡಿಜಿಲಾಕರ್ನಲ್ಲಿ ಸಹ ಸಂಗ್ರಹಿಸಿ ಇಡಬಹುದು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.