ಭುವನೇಶ್ವರ, ಒಡಿಶಾ: ಒಡಿಶಾದಲ್ಲಿ ಚಾಲಕರು ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ, ರಾಯಗಡ ಜಿಲ್ಲೆಯಲ್ಲಿರುವ ವಧುವಿನ ಗ್ರಾಮವನ್ನು ವರ ಹಾಗೂ ಆತನ ಕುಟುಂಬದವರು ಕಾಲ್ನಡಿಗೆ ಮೂಲಕವೇ ತಲುಪಿದ ಘಟನೆ ನಡೆದಿದೆ.

ಕಲ್ಯಾಣ್ಸಿಂಗ್ಪುರದ ಬ್ಲಾಕ್ನ ಸುನಖಂಡಿ ಪಂಚಾಯತ್ನಿಂದ ದಿಬಲಪಾಡು ಗ್ರಾಮವನ್ನು ತಲುಪಲು ಕೆಲವು ಮಹಿಳೆಯರೂ ಸೇರಿದಂತೆ ವರನ ಕಡೆಯವರು ಗುರುವಾರ ರಾತ್ರಿ ಇಡೀ ಕಾಲ್ನಡಿಗೆಯಲ್ಲಿ ಸಾಗಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಚಾಲಕರ ಮುಷ್ಕರದಿಂದಾಗಿ ಸಂಚಾರ ಸೌಲಭ್ಯ ಇಲ್ಲ. ನಾವು ಇಡೀ ರಾತ್ರಿ ಕಾಲ್ನಡಿಗೆಯ ಮೂಲಕ ಸಾಗಿ ವಧುವಿನ ಗ್ರಾಮ ತಲುಪಿದ್ದೇವೆ. ನಮ್ಮ ಬಳಿ ಬೇರೆ ಆಯ್ಕೆ ಇರಲಿಲ್ಲ’ ಎಂದು ವರನ ಕುಟುಂಬ ಸದಸ್ಯರೊಬ್ಬರು ಹೇಳಿದ್ದಾರೆ. ವಧು–ವರರ ವಿವಾಹ ಶುಕ್ರವಾರ ಬೆಳಿಗ್ಗೆ ಜರುಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.