ಲಖನೌ: ಹೆಣ್ಣು ಮಕ್ಕಳ ಮದುವೆ ವೇಳೆ ಪೋಷಕರು, ಕಾರು, ಗೃಹೋಪಯೋಗಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ.

ಆದರೆ ಈಗ ಉತ್ತರ ಪ್ರದೇಶದಲ್ಲಿ ವರನಿಗೆ ವಧುವಿನ ಪೋಷಕರು ಬುಲ್ಡೋಜರ್ ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:2 ವರ್ಷದ ಮಗುವನ್ನು ಮೊದಲನೇ ಮಹಡಿಯಿಂದ ಎಸೆದ ತಂದೆ

ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯ ದೇವಗಾಂವ್ ಗ್ರಾಮದಲ್ಲಿ ವರ ಯೋಗೇಂದ್ರ ಪ್ರಜಾಪತಿ ಮತ್ತು ವಧು ನೇಹಾ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಅಚ್ಚರಿ ಕಾದಿತ್ತು.

ವರನಿಗೆ ಹೊಚ್ಚ ಹೊಸ ಬುಲ್ಡೋಜರ್ ಉಡುಗೊರೆಯಾಗಿ ನೀಡಿರುವುದನ್ನು ಕಂಡು ಅತಿಥಿಗಳು ಆಶ್ಚರ್ಯಚಕಿತಗೊಂಡರು.

ನನ್ನ ಅಳಿಯ ಭಾರತೀಯ ನೌಕಾಪಡೆಯಲ್ಲಿ ದುಡಿಯುತ್ತಿದ್ದಾನೆ. ಅವನಿಗೆ ಕಾರನ್ನು ನೀಡಿದರೆ ಉಪಯೋಗವಾಗದು. ಬುಲ್ಡೋಜರ್ ನೀಡುವುದರೊಂದಿಗೆ ದಂಪತಿಗಳು ಹೆಚ್ಚುವರಿ ಆದಾಯ ಸಂಪಾದಿಸಬಹುದು ಎಂದು ನೇಹಾಳ ತಂದೆ ಪರಶುರಾಮ್ ತಿಳಿಸಿದರು.

ವರದಕ್ಷಿಣೆ ನೀಡುವುದನ್ನು ನಾವು ವಿರೋಧಿಸುತ್ತೇವೆ. ನಾವು ಬೇಡಿಕೆ ಕೂಡ ಇಟ್ಟಿರಲಿಲ್ಲ. ಈಗ ಬುಲ್ಡೋಜರ್ ಉಡುಗೊರೆಯಾಗಿ ದೊರಕಿರುವುದು ನಿಜಕ್ಕೂ ಅಚ್ಚರಿ ತಂದಿದೆ ಎಂದು ಯೋಗೇಂದ್ರ ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಅಕ್ರಮ ಕಟ್ಟಡಜತೆಗೆಪ್ರತಿಭಟನೆ ನಡೆಸಿದವರ ಕಟ್ಟಡ ನೆಲಸಮ ಮಾಡಲು ಬುಲ್ಡೋಜರ್ ಬಳಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.