ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್ ಎಎಪಿ ಸದಸ್ಯತ್ವ ಅಭಿಯಾನ; 60 ಲಕ್ಷ ಸದಸ್ಯರನ್ನು ಹೊಂದುವ ಗುರಿ

Published : 5 ಅಕ್ಟೋಬರ್ 2024, 11:00 IST
Last Updated : 5 ಅಕ್ಟೋಬರ್ 2024, 11:00 IST
ಫಾಲೋ ಮಾಡಿ
Comments

ಅಹಮದಾಬಾದ್: ಆಮ್‌ ಆದ್ಮಿ ಪಕ್ಷವು (ಎಎಪಿ) ಗುಜರಾತ್‌ನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಇಂದು (ಶನಿವಾರ) ಚಾಲನೆ ನೀಡಿದ್ದು, 2026ರ ಡಿಸೆಂಬರ್‌ ವೇಳೆಗೆ 60 ಲಕ್ಷ ಸದಸ್ಯರನ್ನು ಹೊಂದುವ ಗುರಿ ಹಾಕಿಕೊಂಡಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಇಸುದಾನ್‌ ಗಧ್ವಿ ಅವರು ನಗರದಲ್ಲಿ ನಡೆದ ಸಮಾರಂಭದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಗುಜರಾತ್‌ ಶ್ರೇಯಕ್ಕಾಗಿ ಎಎಪಿ ಸೇರುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

'2022ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು 41 ಲಕ್ಷ ಮತಗಳನ್ನು ಪಡೆದಿತ್ತು' ಎಂದಿರುವ ಇಸುದಾನ್‌, 'ಗುಜರಾತ್‌ನಲ್ಲಿ ತನ್ನ ಕುಟುಂಬವನ್ನು ವಿಸ್ತರಿಸಲು ಎಎಪಿ ಬಯಸಿದೆ. ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡುವ ಸರಳ ಪ್ರಕ್ರಿಯೆ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ' ಎಂದು ಹೇಳಿದ್ದಾರೆ.

'ಪಕ್ಷಕ್ಕೆ ಸೇರಲು ಬಯಸುವವರು ಮೊಬೈಲ್‌ ಮೂಲಕ ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿ ಅರ್ಜಿ ಭರ್ತಿ ಮಾಡಬೇಕು. ನಂತರ ಪಕ್ಷದ ಸದಸ್ಯತ್ವ ಸಿಗಲಿದ್ದು, ಐಡಿ ಕಾರ್ಡ್‌ ಸಹ ನೀಡಲಾಗುವುದು' ಎಂದಿದ್ದಾರೆ.

'2026ರ ಡಿಸೆಂಬರ್ ಹೊತ್ತಿಗೆ 60 ಲಕ್ಷ ಸದಸ್ಯರನ್ನು ಹೊಂದುವ ಗುರಿ ಹಾಕಿಕೊಂಡಿದ್ದೇವೆ. ಸದ್ಯ 5 ಲಕ್ಷ ಸದಸ್ಯರನ್ನು ಹೊಂದಿದ್ದು, ಗುರಿ ಸಾಧಿಸುವ ನಿರೀಕ್ಷೆ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಡೆಸುತ್ತಿರುವ ಸದಸ್ಯತ್ವ ಅಭಿಯಾನದ ಬಗ್ಗೆ ಕಿಡಿಕಾರಿರುವ ಇಸುದಾನ್‌, ಕೇಸರಿ ಪಕ್ಷವು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ದೂರಿದ್ದಾರೆ. ಆಡಳಿತ ಪಕ್ಷವು, ಆಸ್ಪತ್ರೆಗಳಲ್ಲಿನ ರೋಗಿಗಳು, ಕಾಲೇಜು ವಿದ್ಯಾರ್ಥಿಗಳನ್ನು ಅವರ ಅನುಮತಿ ಇಲ್ಲದೆಯೇ ನೋಂದಣಿ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ 2022ರಲ್ಲಿ ನಡೆದ ಚುನಾವಣೆಯಲ್ಲಿ ಎಎಪಿಯು, ಶೇ 13 ರಷ್ಟು ಮತ ಪಡೆದಿತ್ತು. ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT