ಅಹಮದಾಬಾದ್: ಗುಜರಾತ್ ಸಚಿವ ಸಂಪುಟವು ಎರಡು ದಿನಗಳಲ್ಲಿ ರಚನೆ ಆಗಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

‘ವಿಜಯ ರೂಪಾಣಿ ಅವರು ಹುದ್ದೆ ತೊರೆದ ನಂತರ ಭೂಪೇಂದ್ರ ಪಟೇಲ್ (59) ಅವರು ಸೋಮವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಚರ್ಚೆಗಳು ನಡೆಯುತ್ತಿದ್ದು ಬುಧವಾರ ಅಥವಾ ಗುರುವಾರ ಉಳಿದವರ ಪ್ರಮಾಣವಚನ ನಡೆಯಲಿದೆ’ ಎಂದು ಬಿಜೆಪಿ ವಕ್ತಾರ ಯಮಲ್ ವ್ಯಾಸ್ ಮಂಗಳವಾರ ತಿಳಿಸಿದ್ದಾರೆ.

ರೂಪಾಣಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ನಿತಿನ್ ಪಟೇಲ್ ಅವರನ್ನು ಹೊಸ ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳಲಾಗುವುದೇ ಎಂಬ ಬಗ್ಗೆ ರಾಜ್ಯ ಬಿಜೆಪಿ ವಲಯಗಳಲ್ಲಿ ಊಹಾಪೋಹಗಳಿವೆ.

ಸಾಧ್ಯವಾದಷ್ಟು ಮಟ್ಟಿಗೆ ಹಿರಿಯ ನಾಯಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.