ಹೊಸಪೇಟೆ (ವಿಜಯನಗರ): ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನ ‘ಸೆಂಟ್ರಲ್ ವಿಸ್ತಾ’ದ ವಸ್ತು ಸಂಗ್ರಹಾಲಯದಲ್ಲಿ ವಿಶ್ವಪ್ರಸಿದ್ಧ ಹಂಪಿ ಸ್ಮಾರಕದ ಚಿತ್ರಗಳು ಕಂಗೊಳಿಸಲಿವೆ.

ಸೆಂಟ್ರಲ್ ವಿಸ್ತಾ ಅವೆನ್ಯೂಪುನರ್ ಅಭಿವೃದ್ಧಿ ಯೋಜನೆಯಡಿ ತ್ರಿಕೋನಾಕಾರದ ನೂತನ ಸಂಸತ್ ಭವನ, ವಿಜಯ ಚೌಕ್ನಿಂದ ಇಂಡಿಯಾ ಗೇಟ್ ವರೆಗಿನ 3 ಕಿ.ಮೀ ಉದ್ದದ ರಾಜಪಥ ಅಭಿವೃದ್ಧಿ, ಪ್ರಧಾನಿ ನೂತನ ನಿವಾಸ, ಕಚೇರಿ ಹಾಗೂ ಉಪರಾಷ್ಟ್ರಪತಿಗಳ ನೂತನ ಕಚೇರಿ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಅದೇ ರೀತಿ ಅತ್ಯಾಧುನಿಕ ವಸ್ತು ಸಂಗ್ರಹಾಲಯ ಅಭಿವೃದ್ಧಿ ಪಡಿಸಲಾಗುತ್ತಿದೆ. ದೇಶದ ಇತಿಹಾಸ, ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿನಿಧಿಸುವ ದೇಶದ ಪ್ರಮುಖ ಸ್ಮಾರಕಗಳು, ಕಟ್ಟಡಗಳ 3ಡಿ ಛಾಯಾಚಿತ್ರಗಳನ್ನು ಅಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಅದರಲ್ಲಿ ಹಂಪಿ ಸ್ಮಾರಕಗಳಿಗೂ ಪ್ರಾಮುಖ್ಯತೆ ಸಿಕ್ಕಿರುವುದು ವಿಶೇಷ.

ಹಂಪಿಯ ಮಹಾನವಮಿ ದಿಬ್ಬ, ರಾಜ ಪ್ರಾಂಗಣ, ರಾಜ ಸಭಾಂಗಣ, ಗುಪ್ತ ಮಾರ್ಗ, ವಿಜಯನಗರ ಕಾಲದ ಕಮಲಾಪುರ ಕೆರೆ, ತುರ್ತಾ ಕಾಲುವೆಯ ಚಿತ್ರಗಳು ಹಾಗೂ ಅವುಗಳ ಫೈಬರ್ ಪ್ರತಿಕೃತಿ ತಯಾರಿಸಿ, ಅವುಗಳ ಸಮಗ್ರ ಮಾಹಿತಿಯೊಂದಿಗೆ ವಸ್ತು ಸಂಗ್ರಹಾಲಯದಲ್ಲಿ ಇಡಲು ತೀರ್ಮಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.