ಡೊಮಿನಿಕಾ: ಡೊಮಿನಿಕಾದಲ್ಲಿ ಬಂಧಿತನಾಗಿರುವ ವಜ್ರವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗಾಸ್ಟನ್ ಬ್ರೌನ್ ಸೂಚಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಂಗಳವಾರ ರಾತ್ರಿ (ಸ್ಥಳೀಯ ಕಾಲಮಾನ) ಚೋಕ್ಸಿ ಡೊಮಿನಿಕಾದಲ್ಲಿ ಬಂಧನವಾಗಿರುವ ಸುದ್ದಿ ವರದಿಯಾದ ನಂತರ ಈ ಹೇಳಿಕೆ ನೀಡಿದ್ದಾರೆ. ಚೋಕ್ಸಿಯನ್ನು ಮಾತೃಭೂಮಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

’ಚೋಕ್ಸಿಯನ್ನು ಮತ್ತೆ ಆಂಟಿಗುವಾಗೆ ಮರಳಿ ಕರೆತರಬಾರದು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ಆತ ತನ್ನ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಎದುರಿಸಬೇಕಿರುವುದರಿಂದ ಭಾರತಕ್ಕೆ ಹಿಂತಿರುಗಬೇಕಿದೆ‘ ಎಂದು ಆಂಟಿಗುವಾ ಮತ್ತು ಬಾರ್ಬುಡಾ ಪತ್ರಕರ್ತರಿಗೆ ಬ್ರೌನ್ ತಿಳಿಸಿದ್ದಾರೆ ಎಂದು ಆಂಟಿಗುವಾ ನ್ಯೂಸ್ ರೂಮ್ ವರದಿ ಮಾಡಿದೆ.

2017ರಲ್ಲಿ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದು 2018ರಿಂದ ಅಲ್ಲಿ ನೆಲೆಸಿದ್ದರು. ಆದರೆ ಡೊಮಿನಿಕಾದ ಪೌರತ್ವವನ್ನು ಚೋಕ್ಸಿ ಪಡೆದಿಲ್ಲ. ಆದ್ದರಿಂದ ನೇರವಾಗಿ ಭಾರತಕ್ಕೆ ಮರಳಿಸಲು ಸಾಧ್ಯವಾಗುತ್ತದೆ ಎಂದು ಬ್ರೌನ್ ತಿಳಿಸಿದರು ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.