ಚಂಡೀಗಢ: ಹರಿಯಾಣ ವಿಧಾನಸಭೆಯ ಎಲ್ಲಾ 90 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ. ಈ ಮೂಲಕ ಗೆಲುವಿನ ಹ್ಯಾಟ್ರಿಕ್ ಸಾಧಿಸಿದೆ.

ಸ್ಪಷ್ಟ ಬಹುಮತಕ್ಕೆ 46 ಸ್ಥಾನಗಳ ಅಗತ್ಯ ಇತ್ತು. ಈ ಪೈಕಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆಯಿತು. ಕಾಂಗ್ರೆಸ್ 37, ಐಎನ್‌ಎಲ್‌ಡಿ 2, ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳನ್ನು ಗೆದ್ದು ಕೊಂಡಿದ್ದಾರೆ. ಕಾಂಗ್ರೆಸ್ ದೊಡ್ಡ ವಿರೋಧ ಪಕ್ಷವಾಗಿ ಹೊರ ಹೊಮ್ಮಿದೆ.

ಸಿಎಂ ನಯಾಬ್ ಸಿಂಗ್ ಸೈನಿ ಅವರೇ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹರಿಯಾಣದಲ್ಲಿ ಒಟ್ಟು 1,031 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. 2 ಕೋಟಿಗೂ ಅಧಿಕ ಜನರು ಮತ ಚಲಾವಣೆ ಮಾಡಿದ್ದರು.

ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ. ಈ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.

ಫಲಿಂತಾಂಶ ಮಾಹಿತಿಯ ಹೈಲೈಟ್ಸ್ ಇಲ್ಲಿದೆ...

ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್

ಮಧ್ಯಾಹ್ನ 2 ಗಂಟೆ ಟ್ರೆಂಡ್ ಪ್ರಕಾರ, ಹರಿಯಾಣದಲ್ಲಿ ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, 3ನೇ ಬಾರಿಗೆ ಅಧಿಕಾರಕ್ಕೆ ಬರುವ ಸೂಚನೆ ಸಿಕ್ಕಿದೆ. ಕಾಂಗ್ರೆಸ್ 34, ಐಎನ್‌ಎಲ್‌ಡಿ 2 ಮತ್ತು ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
.Highlights: ಜಮ್ಮು–ಕಾಶ್ಮೀರದಲ್ಲಿ Congres-NC, ಹರಿಯಾಣದಲ್ಲಿ ಬಿಜೆಪಿ ಮುನ್ನಡೆ.LIVE: ಹರಿಯಾಣದಲ್ಲಿ ಸರ್ಕಾರ ರಚನೆಯತ್ತ ಬಿಜೆಪಿ, 50 ಸ್ಥಾನಗಳಲ್ಲಿ ಮುನ್ನಡೆx.
ಎಎಪಿ ಶೂನ್ಯ ಸಂಪಾದನೆ...

ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿರುವ ಎಎಪಿ 88 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ಒಂದೂ ಸ್ಥಾನವನ್ನು ಗೆಲ್ಲದೇ ಶೂನ್ಯ ಸಂಪಾದನೆ ಮಾಡಿದೆ. ಪಕ್ಷದ ಸಾಧನೆಯಿಂದ ಅರವಿಂದ್ ಕೇಜ್ರಿವಾಲ್ ಅವರಿಗೆ ಮುಖಭಂಗವಾದಂತಾಗಿದೆ.

ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕುರುಕ್ಷೇತ್ರದ ಜ್ಯೋತಿಸರ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಅವರು ಲಾಡ್ವಾ ವಿಧಾನಸಭಾ ಕ್ಷೇತ್ರದಿಂದ 16,054 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಸಂಜೆ ಮಾಜಿ ಮುಖ್ಯಮಂತ್ರಿ ಖಟ್ಟರ್ ಅವರ ಮನೆಯಲ್ಲಿ ಬಿಜೆಪಿ ಮುಖಂಡರ ಸಭೆ ನಡೆಯಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಹರಿಯಾಣದಲ್ಲಿ ನಯಾಬ್ ಸಿಂಗ್ ಸೈನಿ ಅವರೇ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಂದು ಕಿಂಗ್ ಮೇಕರ್, ಇಂದು ಸ್ಥಾನವೇ ಇಲ್ಲ: ಹರಿಯಾಣದಲ್ಲಿ ಮುಗ್ಗರಿಸಿದ ಜೆಜೆಪಿ

2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿದ್ದ ‘ಜನನಾಯಕ ಜನತಾ ಪಕ್ಷ’(ಜೆಜೆಪಿ), ಈ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲ್ಲಾಗದೇ ಹೀನಾಯವಾಗಿ ಸೋತಿದೆ. ಈ ಮೂಲಕ ಠೇವಣಿ ಉಳಿಸಿಕೊಳ್ಳುವಲ್ಲಿಯೂ ಜೆಜೆಪಿ ಸೋತಿದೆ.

ಚೌತಾಲ ಕುಟುಂಬದ ಆಂತರಿಕ ಕಲಹದಿಂದಾಗಿ 2018ರಲ್ಲಿ ಮಾತೃ ಪಕ್ಷ ‘ಭಾರತೀಯ ರಾಷ್ಟ್ರೀಯ ಲೋಕದಳ’(ಐಎನ್‌ಎಲ್‌ಡಿ) ವಿಭಜನೆಗೊಂಡು ಜನನಾಯಕ ಜನತಾ ಪಕ್ಷ ಹುಟ್ಟುಕೊಂಡಿತ್ತು. ಅಜಯ್ ಸಿಂಗ್ ಚೌತಾಲ ಅವರ ನೇತೃತ್ವದಲ್ಲಿ 2019 ಚುನಾವಣೆ ಎದುರಿಸಿದ್ದ ಜೆಜೆಪಿ, 10 ಸ್ಥಾನಗಳನ್ನು ಗೆದ್ದು ಕಿಂಗ್ ಮೇಕರ್ ಆಗಿತ್ತು.

ಐಎನ್‌ಎಲ್‌ಡಿಗೆ ಎರಡೇ ಸ್ಥಾನ

ಐಎನ್‌ಎಲ್‌ಡಿ 2 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಪಕ್ಷದ ಪ್ರಮುಖ ನಾಯಕರು ಸೋಲು ಕಂಡಿದ್ದಾರೆ.

ಹರಿಯಾಣದಲ್ಲಿ ಸ್ಪರ್ಧಿಸಿರುವ ಎಲ್ಲ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿರುವ ಎಎಪಿಗೆ ಜಮ್ಮು–ಕಾಶ್ಮೀರದ ಒಂದು ಕಡೆ ಜಯಗಳಿಸಿರುವುದು ಸಂತಸವನ್ನುಂಟು ಮಾಡಿದೆ.

ಹಾಡು ಹಾಡಿದ ವಿಜ್

ಹರಿಯಾಣದಲ್ಲಿ ಬಿಜೆಪಿಯು ಗೆಲುವಿನತ್ತ ಮುನ್ನಡೆ ಸಾಧಿಸುತ್ತಿದ್ದಂತೆಯೇ ಪಕ್ಷದ ನಾಯಕ ಅನಿಲ್ ವಿಜ್ ಅವರು ಬಾಲಿವುಡ್‌ನ ‘ಹಮ್ ದೋನೊ’ ಸಿನಿಮಾದ ‘ಮೈನ್ ಜಿಂದಗಿ ಕಾ ಸಾತ್ ನಿಭಾತ ಚಲಾ ಗಯಾ ಹರ್ ಫಿಕ್ರ್ ಕೊ ಧೂಯೇಂ ಮೇನ್ ಉಡ್ತಾ ಚಲಾ ಗಯಾ’ (ಜೀವನವು ಸಾಗಿದಂತೆ ಹೆಜ್ಜೆ ಹಾಕಬೇಕು...) ಹಾಡನ್ನು ಹಾಡಿದರು.

ಹೂಡಾಗೆ ಗೆಲುವು

ಕಾಂಗ್ರೆಸ್ ನಾಯಕ ಭೂಪೇಂದ್ರ ಸಿಂಗ್ ಹೂಡಾ ಅವರು ಗಂಢಿ ಸಂಪಲಾ ಕಿಲೋಯ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜು ಹೂಡಾ ಅವರನ್ನು ಪರಾಭವಗೊಳಿಸಿದರು.

ಚಾತಲಾಗೆ ಸೋಲು

ಹರಿಯಾಣದ ಎಲನಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಐಎನ್‌ಎಲ್‌ಡಿ ನಾಯಕ ಅಭಯ್ ಚೌತಲಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಭರತ್ ಸಿಂಗ್ ಬೇನಿವಾಲ್ ಅವರು ಸೋಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.