ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ದುರಾಡಳಿತ, ಅಪರಾಧೀಕರಣ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಎರಡೂ ವರ್ಷಗಳಿಂದ ಅಧಿಕಾರಿದಲ್ಲಿದ್ದರೂ ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ಈವರೆಗೂ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಾಯಕರು ಕೇವಲ ಹಗರಣಗಲ್ಲಿ ತೊಡಗಿದ್ದಾರೆ. ರೈತರ ಭೂಮಿಗಳನ್ನೂ ಕಬಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
.ಪಂಜಾಬ್ನಿಂದ 40 ಲಕ್ಷ ಟನ್ ಅಕ್ಕಿ ಖರೀದಿ: ಕೇಂದ್ರ ಸರ್ಕಾರ.ಡಾ. ರಾಜ್ ಸಹೋದರ ವರದಪ್ಪನವರ ಮೊಮ್ಮಗನ ಮೊದಲ ಚಿತ್ರ ‘ಮಿಂಚುಹುಳು’ ಅ.4ಕ್ಕೆ ತೆರೆಗೆ.
'ಕಾಂಗ್ರೆಸ್ ಯಾವ ಹಗರಣದಲ್ಲಿ ಭಾಗಿಯಾಗಿಲ್ಲ?, ಕಲ್ಲಿದ್ದಲು ಹಗರಣ, ಜಲಾಂತರ್ಗಾಮಿ ಹಗರಣ, ಅಕ್ಕಿ ಹಗರಣ, ಟ್ಯಾಂಕ್ ಹಗರಣ, ಹೆಲಿಕಾಪ್ಟರ್ ಹಗರಣ, 2-ಜಿ ಹಗರಣ ಸೇರಿದಂತೆ ಪ್ರತಿಯೊಂದು ಹಗರಣದಲ್ಲೂ ಭಾಗಿಯಾಗುವ ಮೂಲಕ ಭ್ರಷ್ಟಾಚಾರದಲ್ಲೇ ತೊಡಗಿದೆ' ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿ ‘ಖರ್ಚಿ-ಪರ್ಚಿ’ (ಲಂಚ ಮತ್ತು ಒಲವು) ಮೂಲಕ ಉದ್ಯೋಗದಲ್ಲೂ ಭ್ರಷ್ಟಾಚಾರ ನಡೆದಿದೆ. ಆದರೆ ಭವಿಷ್ಯದ ಭರವಸೆ ಹೊಂದಿರುವ ಯುವಕರು ಸರದಿ ಸಾಲಿನಲ್ಲಿಯೇ ನಿಂತಿದ್ದಾರೆ ಎಂದು ಹೇಳಿದ್ದಾರೆ.
.ಚುನಾವಣಾ ಬಾಂಡ್ ಹಗರಣ | ಸಚಿವೆ ನಿರ್ಮಲಾ ರಾಜೀನಾಮೆ ನೀಡಲಿ: ಕಾಂಗ್ರೆಸ್.ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಇಳಿಸುವವರೆಗೂ ನಾನು ಸಾಯುವುದಿಲ್ಲ: ಖರ್ಗೆ.
‘ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ದುರಾಡಳಿತ, ಅಪರಾಧೀಕರಣ, ವೋಟ್ ಬ್ಯಾಂಕ್ ರಾಜಕಾರಣ ಎಂದಿರುವ ನಡ್ಡಾ, ಮತ್ತೆ ನಿಮಗೆ ಆ ದಿನಗಳು ಬೇಕೆ’ ಎಂದು ಪ್ರಶ್ನಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ಭಾರತವನ್ನು ಭ್ರಷ್ಟ ರಾಷ್ಟ್ರ ಎಂದು ಕರೆಯಲಾಗಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ವಿಶ್ವದ ಆರ್ಥಿಕತೆಯಲ್ಲಿ 11ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿಕೆ ಕಂಡಿತ್ತು. ಮುಂಬರುವ ಕಾಲಘಟ್ಟದಲ್ಲಿ ಭಾರತವು ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಲಿದೆ ಎಂದು ತಿಳಿಸಿದ್ದಾರೆ.

ಹರಿಯಾಣದಲ್ಲಿ ಅಕ್ಟೋಬರ್ 5ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ.
.ಡಿಕೆಶಿ ಸಿಎಂ ಆಗಲು ವಲಸೆ ನಾಯಕ ಸಿದ್ದರಾಮಯ್ಯ ಎಂದಿಗೂ ಬಿಡುವುದಿಲ್ಲ: ಬಿಜೆಪಿ.ಹಿಜ್ಬುಲ್ಲಾ ನಾಯಕ ನಸ್ರಲ್ಲಾ ಸಾವಿನ ಸುದ್ದಿ ಹೇಳುವಾಗ ಕಣ್ಣೀರಿಟ್ಟ ಟಿವಿ ನಿರೂಪಕಿ.ಬಾಕ್ಸ್ ಆಫೀಸ್ನಲ್ಲಿ ‘ದೇವರ’ ಸದ್ದು: ಎರಡೇ ದಿನದಲ್ಲಿ ₹243 ಕೋಟಿ ಗಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.