ನವದೆಹಲಿ: ‘ಹಿಜಾಬ್ ವಿವಾದವು ವಿದ್ಯಾರ್ಥಿಗಳ ಸೃಷ್ಟಿಯಲ್ಲ. ಇದರ ಹಿಂದೆ ಕರಾವಳಿ ಕರ್ನಾಟಕ ಭಾಗದ, ದುಷ್ಟ ಹಿತಾಸಕ್ತಿ ಹೊಂದಿರುವ ಕೆಲವರ ಕೈವಾಡವಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಹೇಳಿದರು.

‘ಈ ವಿಷಯದಲ್ಲಿ ಮುಸಲ್ಮಾನ ಮತ್ತು ಹಿಂದೂ ಸಮುದಾಯದ ವಿದ್ಯಾರ್ಥಿಗಳ ಹಾದಿತಪ್ಪಿಸುವ ಕೆಲಸವಾಗಿದೆ. ವಿದ್ಯಾರ್ಥಿಗಳು ಈ ವಿಷಯದಲ್ಲಿ ಅಮಾಯಕರು’ ಎಂದು ಸಂಸತ್ತಿನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಕರಾವಳಿ ಕರ್ನಾಟಕ ಭಾಗದ ಸಣ್ಣ ರಾಜಕೀಯ ಸಂಘಟನೆಯೊಂದು ಈ ವಿವಾದದ ಕಿಡಿಯನ್ನು ಹೊತ್ತಿಸಿದೆ. ಈಗ ಎರಡೂ ರಾಷ್ಟ್ರೀಯ ಪಕ್ಷಗಳು (ಕಾಂಗ್ರೆಸ್, ಬಿಜೆಪಿ) ಅದರಿಂದ ರಾಜಕೀಯ ಲಾಭವನ್ನು ಪಡೆಯುತ್ತಿವೆ ಎಂದು ಹೇಳಿದರು.

ವಿದ್ಯಾರ್ಥಿ ಸಮುದಾಯದ ಭವಿಷ್ಯದ ದೃಷ್ಟಿಯಿಂದ ಈ ವಿವಾದವನ್ನು ಕೂಡಲೇ ಹತ್ತಿಕ್ಕಲು ಕ್ರಮಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.