ನವದೆಹಲಿ: ಹಿಂಡನ್ಬರ್ಗ್ ವರದಿ ಹಿನ್ನೆಲೆಯಲ್ಲಿ ಅದಾನಿ ಪ್ರಕರಣದಲ್ಲಿ ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ಗಾಂಧಿ ಅವರ ಬೇಡಿಕೆ ಕುರಿತು ರಾಜ್ಯಸಭೆ ಸ್ಪೀಕರ್ ಜಗದೀಪ್ ಧನ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯು ದೇಶದ ಆರ್ಥಿಕತೆಯನ್ನು ಧ್ವಂಸ ಮಾಡುವ ಉದ್ದೇಶದ ಯತ್ನಕ್ಕೆ ಬಲ ನೀಡಬೇಕು ಎಂದು ಸುಪ್ರೀಂ ಕೋರ್ಟ್ಗೆ ಕೇಳುತ್ತಿದ್ದಾರೆ’ ಎಂದು ಧನಕರ್ ಶುಕ್ರವಾರ ಟೀಕಿಸಿದರು.

ಹಿಂಡನ್ಬರ್ಗ್ ವರದಿ ಹಿನ್ನೆಲೆಯಲ್ಲಿ ರಾಹುಲ್ಗಾಂಧಿ ಅವರು ಭಾನುವಾರ ಮೋದಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು. ತನಿಖೆಯನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದರು.

ರಾಹುಲ್ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಬಿಜೆಪಿ, ಕಾಂಗ್ರೆಸ್ ಪಕ್ಷವು ಈ ಮೂಲಕ ದೇಶದಲ್ಲಿ ಆರ್ಥಿಕ ಅರಾಜಕತೆ ಮೂಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿತ್ತು.

ಉಪರಾಷ್ಟ್ರಪತಿಯು ಆದ ಜಗದೀಪ್ ಧನಕರ್ ಅವರು ಇಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಜಾಯಿಂಟ್ ಮಾಸ್ಟರ್ಸ್ / ಎಲ್ಎಲ್.ಎಂ ಪದವಿ ಕೋರ್ಸ್ನ ಮೊದಲ ತಂಡ ಉದ್ದೇಶಿಸಿ ಮಾತನಾಡಿದರು.

‘ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಕಳೆದ ವಾರವಷ್ಟೇ ದೇಶದ ಆರ್ಥಿಕತೆ ನಾಶಪಡಿಸುವ ಉದ್ದೇಶದ ಅಭಿಯಾನವನ್ನು ಮಾಧ್ಯಮಗಳಲ್ಲಿ ಆರಂಭಿಸಿದ್ದಾರೆ. ಇದು, ನನಗೆ ಕಳವಳ ಮೂಡಿಸಿದೆ’ ಎಂದರು.

‘ದೇಶವನ್ನು ಮೀರಿ ಸ್ವಹಿತಕ್ಕಾಗಿ ಪ್ರತ್ಯೇಕತಾವಾದ ಮಂಡಿಸುವ ಇಂತಹ ಶಕ್ತಿಗಳನ್ನು ಯುವಜನರು ಇಂತಹದ್ದನ್ನು ಖಂಡಿಸಬೇಕು. ಇಂತಹದಕ್ಕೆ ಅವಕಾಶ ನೀಡಬಾರದು.ನೀವು ಕಾನೂನು ವಿದ್ಯಾರ್ಥಿಗಳು. ನಿಮಗೆ ಎರಡು ಸಲಹೆ ನೀಡುತ್ತೇನೆ. ನಿಮ್ಮ ಮೆದುಳಿಗೆ ಕೆಲಸ ಕೊಡಿ. ಸಂಸ್ಥೆಗಳ ಅಧಿಕಾರಮಿತಿ ಸಂವಿಧಾನದಲ್ಲಿಯೇ ನಿರ್ಧಾರವಾಗಿದೆ. ಅದು, ನ್ಯಾಯಾಂಗ, ಕಾರ್ಯಾಂಗ ಅಥವಾ ಶಾಸಕಾಂಗ ಯಾವುದೇ ಇರಲಿ. ಅಧಿಕಾರ ವ್ಯಾಪ್ತಿಯು ನಿರ್ಧಾರವಾಗಿದೆ’ ಎಂದು ಹೇಳಿದರು.

ಸಾಮಾಜಿಕ ಜಾಲತಾಣ ವಿಭಾಗದ ಮೂಲಕ ಕಾಂಗ್ರೆಸ್ ಪಕ್ಷ ಧನ್ಕರ್ ಹೇಳಿಕೆಗೆ ತಿರುಗೇಟು ನೀಡಿದೆ. ‘ಧನಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಈ ಮಾತು ಹೇಳಿದ್ದಾರೆ’ ಎಂದು ವ್ಯಾಖ್ಯಾನಿಸಿದೆ.

‘ಪ್ರಧಾನಿ ಮೋದಿ ಅವರನ್ನು ಹೀಗೆ ಟ್ರೋಲ್ ಮಾಡುವುದು ಸರಿಯಲ್ಲ. ನಿಮ್ಮ ನೋವು ಅರ್ಥ ಆಗುತ್ತದೆ. ನಿರುದ್ಯೋಗ, ಹಣದುಬ್ಬರ, ಆದಾಯ ಕುಸಿತ, ಅಸಹಾಯಕ ರೈತ, ತೆರಿಗೆ ಹೊರೆ, ಬಡತನ ಸ್ಥಿತಿ ಏರಿಕೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಅಂತರ.. ಈ ಎಲ್ಲವನ್ನೂ ನೋಡಿಯೂ ನೀತಿ ರೂಪಿಸುವ ಬದಲು, ವ್ಯಕ್ತಿಯೊಬ್ಬರು ಹೇಗೆ ಮೌನವಾಗಿರುವುದು ಸಾಧ್ಯ?’ ಎಂದು ಪಕ್ಷದ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೆತ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.